ದಿಲ್ಲಿ ಸಿಎಂ ಅತಿಶಿಗೆ ಸೇರಿದ ವಸ್ತುಗಳನ್ನು ಅಧಿಕೃತ ನಿವಾಸದಿಂದ ಹೊರಹಾಕಲಾಗಿದೆ : ಆಪ್
Update: 2024-10-09 18:41 IST
Photo : NDTV
ದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅತಿಶಿ ಅವರಿಗೆ ಸೇರಿದ ವಸ್ತುಗಳನ್ನು ಅವರ ಅಧಿಕೃತ ನಿವಾಸದಿಂದ ಹೊರಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷವು ಬುಧವಾರ ಹೇಳಿಕೊಂಡಿದೆ ಎಂದು NDTV ವರದಿ ಮಾಡಿದೆ.
ವರದಿಗಳ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ಆದೇಶದ ನಂತರ ಅತಿಶಿಯವರ ವಸ್ತುಗಳನ್ನು ಹೊರಗೆಸೆಯಲಾಗಿದೆ ಎಂದು ತಿಳಿದು ಬಂದಿದೆ.