×
Ad

ಕದನ ವಿರಾಮ: ಹಮಾಸ್ ನಿಂದ 24 ಒತ್ತೆಯಾಳುಗಳ ಬಿಡುಗಡೆ

Update: 2023-11-25 07:48 IST

Photo: twitter.com/EA_WorldView

ಗಾಝಾ: ಇಸ್ರೇಲ್ ಹಾಗೂ ಹಮಾಸ್ ನಡುವಿನ 48 ದಿನಗಳ ಸಂಘರ್ಷದಲ್ಲಿ ಮೊದಲ ಬಾರಿಗೆ ಶುಕ್ರವಾರ ಕದನ ವಿರಾಮವನ್ನು ಉಭಯ ಬಣಗಳು ಘೋಷಿಸಿದ್ದು, 24 ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, 39 ಮಂದಿ ಫೆಲಸ್ತೀನ್ ಪ್ರಜೆಗಳನ್ನು ಬಂಧಮುಕ್ತಗೊಳಿಸಿದೆ.

ಕತಾರ್ ಮಧ್ಯಸ್ಥಿಕೆಯ ಈ ಕದನ ವಿರಾಮ ಜಾರಿಯ ಬೆನ್ನಲ್ಲೇ ಇಸ್ರೇಲ್ ಹಾಗೂ ಹಮಾಸ್, "ಯುದ್ಧ ಕೊನೆಗಳ್ಳುವುದು ಇನ್ನೂ ಬಹುದೂರ ಇದೆ" ಎಂದು ಹೇಳಿವೆ.

ಉಭಯ ಬಣಗಳು ಅಪ್ರಚೋದಿತ ಗುಂಡಿನ ದಾಳಿ ಮತ್ತು ಇತರ ಉಲ್ಲಂಘನೆಯ ಬಗ್ಗೆ ಪರಸ್ಪರ ಆರೋಪ ಮಾಡಿಕೊಂಡಿದ್ದರೂ, ಶುಕ್ರವಾರ ಯಾವುದೇ ಪ್ರಮುಖ ಬಾಂಬ್ ದಾಳಿ ಅಥವಾ ರಾಕೆಟ್ ದಾಳಿ ನಡೆದಿಲ್ಲ. ಇಸ್ರೇಲ್ ಮಾಧ್ಯಮಗಳ ಪ್ರಕಾರ 13 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಮತ್ತು 12 ಮಂದಿ ಥಾಯ್ಲೆಂಡ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ.

ಕದನ ವಿರಾಮ ಘೋಷಣೆಯ ಸಂದರ್ಭದಲ್ಲೇ ಉಭಯ ಬಣಗಳು ಪರಸ್ಪರ ಎಚ್ಚರಿಕೆ ನೀಡಿದ್ದು, "ಮುಂದಿನ ದಿನಗಳು ಸಂಕೀರ್ಣ. ಎಲ್ಲವೂ ಮುಗಿಯುವವರೆಗೂ ಯಾವುದೂ ಮುಗಿದಂತಲ್ಲ" ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಒತ್ತೆಯಾಳು ಒಪ್ಪಂದದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಯುದ್ಧದ ಎಲ್ಲ ಗುರಿಗಳನ್ನು ಸಾಧಿಸಲು ದೇಶ ಬದ್ಧ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್  ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News