×
Ad

ಚಿಕ್ಕಮಗಳೂರು | ಮನೆಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಆರೋಪಿಗಳಾದ ಭರತ್, ದಿಲೀಪ್, ಹರೀಶ್ ಬಂಧನ

Update: 2026-02-19 09:20 IST

ಚಿಕ್ಕಮಗಳೂರು: ಇತ್ತೀಚೆಗೆ ನಗರದ ವಿಜಯಪುರ ಬಡಾವಣೆಯಲ್ಲಿ ಮನೆ ಮೇಲೆ ಕಲ್ಲು ಎಸೆದ ಪ್ರಕರಣ ಹಾಗೂ ನಂತರ ನಡೆದ ಗಲಭೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಗೌರಿ ಕಾಲುವೆಯ ಭರತ್ (23), ರಾಮನಹಳ್ಳಿಯ ದಿಲೀಪ್ (27) ಹಾಗೂ ಬೈಕ್ ಮಾಲೀಕ ಹರೀಶ್ ಅವರನ್ನು ಬಂಧಿಸಲಾಗಿದೆ.

ಈ ಯುವಕರು ಘಟನೆ ನಡೆಯುವ ಮೂರು ದಿನಗಳ ಹಿಂದಿನಿಂದಲೇ  ದೂರುದಾರರ ಮನೆಯ ಸುತ್ತ ಬೈಕಿನಲ್ಲಿ ಓಡಾಡುತ್ತಾ ಅವರನ್ನು ಹಿಂಬಾಲಿಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಅಲ್ಲದೆ, ದೂರುದಾರರೊಂದಿಗೆ ಒಮ್ಮೆ ವಾಗ್ವಾದ ನಡೆದಿರುವುದೂ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News