×
Ad

ಚಿಕ್ಕಮಗಳೂರು | ಮುಳ್ಳಯ್ಯನಗಿರಿಗೆ 2 ದಿನ ಪ್ರವಾಸಿಗರಿಗೆ ನಿರ್ಬಂಧ

Update: 2025-08-26 12:15 IST

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಸೀತಾಳಯ್ಯಗಿರಿಗೆ ಇಂದು, ನಾಳೆ(ಆ.26, 27) ಎರಡು ದಿನಗಳಲ್ಲಿ ಹೊರ ಜಿಲ್ಲೆಗಳ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶಿಸಿದೆ.

ಆ.26 ಮತ್ತು ಆ.27ರಂದು ಚೌತಿ ಹಬ್ಬದ ಅಂಗವಾಗಿ ತಾಲೂಕಿನ ವಸ್ತಾರೆ, ಅಂಬಳೆ, ಜಾಗರ, ಆವತಿ ಹೋಬಳಿಗಳ ಭಕ್ತರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಲ್ಲಿರುವ ದೇವಾಲಯ ಮತ್ತು ಶ್ರೀ ಗುರು ನಾರುಕಾಂತ ಮಠಗಳಿಗೆ ತೆರಳಿ ಚೌತಿ ಕಾಯಿ ಒಡೆಯುವ ವಾಡಿಕೆ ಸಂಪ್ರದಾಯ ಪಾಲಿಸುವುದರಿಂದ ಭಕ್ತರ ಸಂಖ್ಯೆ ಹೆಚ್ಚಿರಲಿದೆ. ಈ ಸಂದರ್ಭ ಪ್ರವಾಸಿಗರು ಮತ್ತು ವಾಹನಗಳದಟ್ಟಣೆ ಹೆಚ್ಚಾದಲ್ಲಿ ಈ ಭಕ್ತರಿಗೆ ತೊಂದರೆಯಾಗಲಿದೆ. ಅದ್ದರಿಂದ ಇಲ್ಲಿನ ಹೋಮ್ ಸ್ಟೆ ರೆಸಾರ್ಟ್ ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಿರುವರನ್ನು ಹೊರತುಪಡಿಸಿ ಈ ಎರಡು ದಿನಗಳಲ್ಲಿ ಗಿರಿ ಭಾಗಕ್ಕೆ ಪ್ರವಾಸ ಮಾಡಲು ಯೋಚಿಸಿರುವವರು ತಮ್ಮ ಪ್ರವಾಸವನ್ನು ಮುಂದೂಡಬೇಕೆಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News