×
Ad

ಮೂಡಿಗೆರೆ: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ರಸ್ತೆ ಮಧ್ಯೆ ಮಲಗಿದ ಯುವಕ!

Update: 2023-10-09 11:54 IST

ಚಿಕ್ಕಮಗಳೂರು, ಅ.9: ಮದ್ಯಪಾನ ಮಾಡಿದ್ದರಿಂದ ಬೈಕ್ ಓಡಿಸಲಾಗದೆ ಯುವಕನೋರ್ವ ರಸ್ತೆ ಮಧ್ಯದಲ್ಲೇ ಬೈಕನ್ನು ತೊರೆದು ಅಲ್ಲೇ ಮಲಗಿ ನಿದ್ದೆ ಹೋದ ಘಟನೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಈ ಬೈಕ್ ಸವಾರ ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲಾಗದೆ ರಸ್ತೆ ಮಧ್ಯೆಯೇ ಬೈಕನ್ನು ಅಡ್ಡ ಹಾಕಿ ಅಲ್ಲೇ ಮಲಗಿದ್ದಾನೆ. ಈ ವೇಳೆ ಬೈಕ್ ಇಂಡಿಕೇಟರ್ ಉರಿಯುತ್ತಿದ್ದ ಕಾರಣ ಬೇರೆ ಯಾವುದೇ ವಾಹನಗಳ ಅಡಿಗೆ ಬೀಳದೆ ಪಾರಾಗಿದ್ದಾನೆ.

ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಗಮನಿಸಿದ ಬೇರೆ ವಾಹನ ಸವಾರರು ಅಪಘಾತ ಸಂಭವಿಸಿದೆ ಎಂದು ಭಾವಿಸಿ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದೆ. ಆದರೆ ಈ ವೇಳೆ ಮಲಗಿದ್ದ ವ್ಯಕ್ತಿ ಎಚ್ಚರಗೊಂಡು ಎದ್ದು ನಿಂತಿದ್ದಾನೆ. ಬಳಿಕ ಬಣಕಲ್ ಠಾಣಾ ಪೊಲೀಸರು ಬೈಕ್ ಸವಾರನನ್ನು ವಶಕ್ಕೆ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News