ಸಿಎ ಪರೀಕ್ಷೆ; ಪ್ರಮೋದ್ ಎಸ್. ಎಸ್. ತೇರ್ಗಡೆ
Update: 2025-11-04 19:07 IST
ಕೊಪ್ಪ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ( ICAI) 2025 ಸೆಪ್ಟೆಂಬರ್ ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕೊಪ್ಪ ತಾಲೂಕಿನ ಕುದ್ರೆಗುಂಡಿಯ ಪ್ರಮೋದ್ ಎಸ್. ಎಸ್. ಸಂಪಗೋಡು ತೇರ್ಗಡೆಯಾಗಿದ್ದಾರೆ.
ಶಿವಣ್ಣ ಮತ್ತು ಶಾರದಾ ದಂಪತಿಯ ಪುತ್ರನಾದ ಪ್ರಮೋದ್, ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2017-20 ಸಾಲಿನಲ್ಲಿ ಬಿಕಾಂ ಪದವಿ ಪಡೆದಿದ್ದಾರೆ.
ಕಾಲೇಜಿನ ಹಳೆ ವಿದ್ಯಾರ್ಥಿಯಾದ ಪ್ರಮೋದ್ ಅವರನ್ನು ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜೇಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಈಶ್ವರಪ್ಪ ಬೆಳ್ಳಾಲೆ, ಅಭಿವೃದ್ಧಿ ಸಮಿತಿಯ ಎಲ್ಲಾಸದಸ್ಯರು, ಪ್ರಾಂಶುಪಾಲರು, ಬೋದಕ/ ಬೋದಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಸಂಘ ಹಾಗು ಹಿರಿಯ ವಿದ್ಯಾರ್ಥಿ ಸಂಘದವರು ಅಭಿನಂದನೆ ಸಲ್ಲಿಸಿದ್ದಾರೆ.