×
Ad

ಚಿಕ್ಕಮಗಳೂರು | ಬಲ್ಲಾಳರಾಯನ ದುರ್ಗಾದ ಕಾಡಿನಲ್ಲಿ ಸಿಲುಕಿದ್ದ 10 ಮಂದಿ ಚಾರಣಿಗರ ರಕ್ಷಣೆ

Update: 2025-06-10 14:01 IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದು ಚಾರಣಕ್ಕೆ ತೆರಳಿ ಕಾಣೆಯಾಗಿದ್ದ 10 ವಿದ್ಯಾರ್ಥಿಗಳನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರೆಕ್ಕಿಂಗ್‌ಗೆ ಬಲ್ಲಾಳರಾಯನ ದುರ್ಗಕ್ಕೆ ಬಂದಿದ್ದರು.

ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರೆಕ್ಕಿಂಗ್‌ ಆರಂಭಿಸಿದ್ದ ಅವರು ದಾರಿ ತಿಳಿಯದೆ ಕಾಡಿನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಓರ್ವನ ಮೊಬೈಲ್‌ನಲ್ಲಿ ನೆಟ್ವರ್ಕ್ ಸಿಕ್ಕಿದ್ದು, ಅವನು ತನ್ನ ಸ್ನೇಹಿತರಿಗೆ ಕರೆಮಾಡಿ ಆರಿಫ್ ಎಂಬವರ ನಂಬರ್ ಪಡೆದು ಸಹಾಯಕ್ಕೆ ಮನವಿ ಮಾಡಿದ್ದನು.

ನಂತರ ಕಾರ್ಯ ಪ್ರವೃತ್ತರಾದ ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸಮಾಜ ಸೇವಕ ಆರೀಫ್, ಸ್ಥಳೀಯರ ಜೊತೆ ಅರಣ್ಯದಲ್ಲಿ ಮಧ್ಯರಾತ್ರಿ 2 ಗಂಟೆವರೆಗೂ ಹುಡುಕಾಟ ನಡೆಸಿ 10 ಮಂದಿಯನ್ನು ಪತ್ತೆಹಚ್ಚಿ ಕರೆ ತಂದಿದ್ದಾರೆ.

ಸಮಾಜ ಸೇವಕ ಆರಿಫ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News