×
Ad

ಚಿಕ್ಕಮಗಳೂರು | ಕಾಮೇನಹಳ್ಳಿ ಫಾಲ್ಸ್ ಗೆ ಬಿದ್ದು ಕಾಲೇಜು ವಿದ್ಯಾರ್ಥಿ ಮೃತ್ಯು

Update: 2025-02-20 11:55 IST

ಚಿಕ್ಕಮಗಳೂರು: ಕಾಮೇನಹಳ್ಳಿ ಫಾಲ್ಸ್ ಗೆ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಚೇತನ್ (18) ಮೃತಪಟ್ಟ ವಿದ್ಯಾರ್ಥಿ. ಶಿಕ್ಷಕರ ಗೈರು ಹಿನ್ನೆಲೆಯಲ್ಲಿ ತರಗತಿಗೆ ರಜೆ ಇದ್ದ ಕಾರಣ ಚೇತನ್ ಸ್ನೇಹಿತರ ಜೊತೆ ಕಾಮೇನಹಳ್ಳಿ ಫಾಲ್ಸ್ ಗೆ ತೆರಳಿದ್ದರು. ಅಲ್ಲಿ ಕಲ್ಲು ಬಂಡೆಯ ಮೇಲಿನಿಂದ ನೀರಿಗೆ ಜಿಗಿದಿದ ಚೇತನ್ ರ ಬಂಡೆ ಕಲ್ಲಿಗೆ ಬಡಿದ ಪರಿಣಾಮ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಫಾಲ್ಸ್ ನಿಂದ ಚೇತನ್ ಮೃತದೇಹ ಮೇಲೆತ್ತಿದ್ದಾರೆ.

ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News