×
Ad

ಚಿಕ್ಕಮಗಳೂರು | ಹೊತ್ತೊಯ್ಯುತ್ತಿದ್ದ ಏಣಿ ವಿದ್ಯುತ್ ತಂತಿಗೆ ತಗುಲಿ ಕೃಷಿಕ ಮೃತ್ಯು

Update: 2025-01-25 13:47 IST

ಚಿಕ್ಕಮಗಳೂರು: ಎತ್ತಿಕೊಂಡು ಹೋಗುತ್ತಿದ್ದ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿದ್ದರಿಂದ ವಿದ್ಯುತ್ ಪ್ರವಹಿಸಿ ಕೃಷಿಕರೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ದೂರು ಸಮೀಪದ ಕೂದುವಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೂದುವಳ್ಳಿ ಗ್ರಾಮದ ಕೃಷಿಕ ಕೆ. ಎಲ್. ಹೂವೇಗೌಡ ಮೃತಪಟ್ಟವರು.

ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕಾಫಿ ತೋಟದ ಮರಗಸಿ ಮಾಡಿಸಲು ಅಲ್ಯೂಮಿನಿಯಂ ಏಣಿಯನ್ನು ತೋಟದೊಳಗೆ ಹೊತ್ತುಕೊಂಡು ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತೋಟದ ಮಧ್ಯೆ ಹಾದುಹೋಗಿದ್ದ ವಿದ್ಯುತ್ ತಂತಿಗೆ ಅಚಾನಕ್ಕಾಗಿ ಏಣಿ ತಗುಲಿದ್ದರಿಂದ ವಿದ್ಯುತ್ ಆಘಾತಕ್ಕೆ ಒಳಗಾದ ಹೂವೇಗೌಡ ಸ್ಥಳದಲ್ಲಿ ಸಾವನಪ್ಪಿದ್ದಾರೆ.

ಇತ್ತೀಚಿಗಷ್ಟೇ ಹೂವೆಗೌಡರ ಮಗ ಟ್ಯಾಕ್ಟರ್ ಅಪಘಾತದದಿಂದ ಗಂಭೀರ ಗಾಯಗಳಾಗಿದ್ದು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ತನ್ನ ಮಗ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ

ತಂದೆ ವಿದ್ಯುತ್ ಸ್ಪರ್ಶದಿಂದ ಅಕಾಲಿಕವಾಗಿ ಅಸುನೀಗಿದ್ದಾರೆ.

ಮೃತರು ಮಡದಿ, ಮಗ ಸೇರಿದಂತೆ ಅಪಾರ ಬಂಧು ಬಳಗ ಕುಟುಂಬವನ್ನು ಅಗಲಿದ್ದಾರೆ.

ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News