ಚಿಕ್ಕಮಗಳೂರು: ನೂತನ ಜಿಲ್ಲಾಧಿಕಾರಿಯಾಗಿ ಎನ್.ಎಂ. ನಾಗರಾಜ್ ನೇಮಕ
Update: 2025-12-31 23:39 IST
ಎನ್.ಎಂ. ನಾಗರಾಜ್
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎನ್.ಎಂ. ನಾಗರಾಜ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಾಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಎನ್.ಮೀನಾನಾಗರಾಜ್ ಅವರನ್ನು ಕಂದಾಯ ಇಲಾಖೆ ಕಮಿಷನರ್ ಆಗಿ ನೇಮಿಸಲಾಗಿದೆ. ಕಳೆದ ಎರಡುವರೆ ವರ್ಷದಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಎನ್. ಎಂ. ನಾಗರಾಜ್ ಅವರು ಕರ್ನಾಟಕ ರಾಜ್ಯ ಸಿಲ್ಕ್ ಡೆವಲಪಮೆಂಟ್ ಕಾರ್ಪೊರೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.