×
Ad

ಚಿಕ್ಕಮಗಳೂರು | ಆತ್ಮಹತ್ಯೆಗೆ ಯತ್ನಿಸಿ ಕೆರೆಗೆ ಹಾರಿದ್ದ ಮಹಿಳೆಯ ರಕ್ಷಣೆ

Update: 2025-07-09 11:06 IST

ಚಿಕ್ಕಮಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸ್ಥಳೀಯ ಯುವಕರಿಬ್ಬರು ರಕ್ಷಣೆ ಮಾಡಿರುವ ಘಟನೆ ಮಂಗಳವಾರ ಸಂಜೆ ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ರಾಮನಹಳ್ಳಿ ನಿವಾಸಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಪತಿಯ ಜೊತೆಗೆ ಜಗಳದ ಬಳಿಕ ಆತ್ಮಹತ್ಯೆಯ ಉದ್ದೇಶದಿಂದ ಕೆರೆಗೆ ಹಾರಿದ್ದರೆನ್ನಲಾಗಿದೆ. ಬಳಿಕ ಕಾಪಾಡಿ ಎಂದು ನದಿಯಲ್ಲಿ ಬೊಬ್ಬೆ ಹಾಕುತ್ತಿದ್ದ ಮಹಿಳೆಯನ್ನು ದಾರಿಯಲ್ಲಿ ಹೋಗುತ್ತಿದ್ದ ಪಕ್ಕದ ಹೋಂ ಸ್ಟೇ ಮಾಲಕ ರಮೇಶ್ ಎಂಬವರು ಗಮನಿಸಿದ್ದಾರೆ. ತಕ್ಷಣ ಸಂಮತ್, ಪ್ರಸನ್ನ ಎಂಬವರನ್ನು ಕರೆಸಿದ್ದಾರೆ. ಅವರಿಬ್ಬರು ಕೆರೆಗೆ ಹಾರಿ ರಂಜಿತಾರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News