×
Ad

ಚಿಕ್ಕಮಗಳೂರು | ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರು ಮೂಲದ ಚಾಲಕ ಹೃದಯಾಘಾತದಿಂದ ಮೃತ್ಯು

Update: 2024-10-06 21:31 IST

ಅವಿನಾಶ್(25)

ಚಿಕ್ಕಮಗಳೂರು : ಜಿಲ್ಲೆಯ ಹೋಮ್ ಸ್ಟೇವೊಂದಕ್ಕೆ ಬೆಂಗಳೂರಿನ ಪ್ರವಾಸಿಗರನ್ನು ಕರೆ ತಂದಿದ್ದ ಟಿಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ರವಿವಾರ ವರದಿಯಾಗಿದೆ.

ಬೆಂಗಳೂರಿನ ಸೋಮನಹಳ್ಳಿ ನಿವಾಸಿಯಾಗಿರುವ ಅವಿನಾಶ್(25) ಹೃದಯಾಘಾತದಿಂದ ಮೃತಪಟ್ಟ ಟಿಟಿ ವಾಹನದ ಚಾಲಕನಾಗಿದ್ದು, ಈತ ರವಿವಾರ ಬೆಳಗ್ಗೆ ಬೆಂಗಳೂರಿನ ಪ್ರವಾಸಿಗರನ್ನು ಚಿಕ್ಕಮಗಳೂರಿಗೆ ಟಿಟಿ ವಾಹನದಲ್ಲಿ ಕರೆ ತಂದಿದ್ದಾನೆ. ಪ್ರವಾಸಿಗರನ್ನು ನಗರ ಸಮೀಪದ ಹೋಮ್ ಸ್ಟೇವೊಂದಕ್ಕೆ ಬಿಟ್ಟಿದ್ದು, ಕೆಲವೇ ಹೊತ್ತಿನಲ್ಲಿ ಚಾಲಕ ಅವಿನಾಶ್ ಹೃದಯಾಘಾತಕ್ಕೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವಿನಾಶ್ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News