ಚಿಕ್ಕಮಗಳೂರು | ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ; 25ಲಕ್ಷ ರೂ. ಮೌಲ್ಯದ ಸ್ವತ್ತು ವಶ
Update: 2025-01-21 22:13 IST
ಚಿಕ್ಕಮಗಳೂರು : ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಪೊಲೀಸರು ಬಂಗಾರದ ಗಟ್ಟಿ ಸೇರಿದಂತೆ 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ಪ್ರಕರಣ ನಡೆದಿದ್ದು, ಪ್ರಭಾರ ವೃತ್ತ ನಿರೀಕ್ಷಕ ಗವಿರಾಜ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ಈ ತಂಡ ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಮುಹಮ್ಮದ್ ಕಬೀರ್, ಬೆಂಗಳೂರಿನ ಡಿಜೆ ಹಳ್ಳಿ ನಿವಾಸಿ ಯೂಸುಫ್ ಪಾಷಾ ಎಂಬವರನ್ನು ಬಂಧಿಸಿ ಒಟ್ಟು 334 ಗ್ರಾಂ ಬಂಗಾರದ ಗಟ್ಟಿ ಮತ್ತು ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್ ಸೇರಿದಂತೆ ಒಟ್ಟು 25 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.