×
Ad

ಚಿಕ್ಕಮಗಳೂರು | ಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ತಮಿಳುನಾಡು ಮೂಲದ ಬಾಲಕಿ ಮೃತ್ಯು

Update: 2024-05-05 19:49 IST
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಭದ್ರಾ ನದಿ ನೀರಿನಲ್ಲಿ ಕುಟುಂಬಸ್ಥರೊಂದಿಗೆ ಸ್ನಾನ ಮಾಡಲು ಹೋಗಿದ್ದ ತಮಿಳುನಾಡು ಮೂಲದ ಬಾಲಕಿಯೋಬ್ಬಳು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಬಾಲಕಿಯನ್ನು ಜಾಹ್ನವಿ(12) ಎಂದು ಗುರುತಿಸಲಾಗಿದ್ದು, ಬಾಲಕಿ ಜಾಹ್ನವಿ ತನ್ನ ಕುಟುಂಬಸ್ಥರೊಂದಿಗೆ ತಮಿಳುನಾಡು ರಾಜ್ಯದ ಹಸೂರಿನಿಂದ ಕಳಸ, ಹೊರನಾಡು ಪ್ರವಾಸಕ್ಕೆ ಬಂದಿದ್ದರು. ಶನಿವಾರ ಸಂಜೆ ಹೊರಾಡು ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಯಲ್ಲಿ ಸ್ನಾನ ಮಾಡಿಕೊಂಡು ದೇವಾಲಯಕ್ಕೆ ಹೋಗಲು ಕುಟುಂಬಸ್ಥರು ನಿರ್ಧರಿಸಿದ್ದರು. ನದಿಯಲ್ಲಿ ಕುಟುಂಬಸ್ಥರು ಸ್ನಾನ ಮಾಡಲು ಇಳಿದಿದ್ದ ವೇಳೆ ಬಾಲಕ ಜಾಹ್ನವಿ ಆಳವಿಲ್ಲದ ಜಾಗದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನದಿ ನೀರಿನಲ್ಲಿ ಮುಳುಗಿದ್ದು, ಬಳಿಕ ದಿಢೀರ್ ಅಸ್ವಸ್ಥಳಾಗಿದ್ದಾಳೆ ಎನ್ನಲಾಗಿದೆ.

ಇದನ್ನು ಕಂಡ ಪೋಷಕರು ಆಕೆಯನ್ನು ಕೂಡಲೇ ಕಳಸ ಆಸ್ಪತ್ರೆಗೆ ಕರೆ ತಂದಿದ್ದು, ಈ ವೇಳೆ ಬಾಲಕಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News