×
Ad

ಚಿಕ್ಕಮಗಳೂರು: ವೈದ್ಯರ ನಿರ್ಲ ಕ್ಷ್ಯ ಆರೋಪ; ಮೂರು ದಿನದ ಬಾಣಂತಿ ಮೃತ್ಯು

Update: 2024-12-18 14:30 IST

ಸಾಂದರ್ಭಿಕ ಚಿತ್ರ  pinterest.com

ಚಿಕ್ಕಮಗಳೂರು: ಮೂರು ದಿನದ ಬಾಣಂತಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲ ಕ್ಷ್ಯ ವೇ ಕಾರಣವೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ನಗರದ ಶಂಕರಪುರ ನಿವಾಸಿ ಸವಿತಾ (26) ಮೃತಪಟ್ಟ ಮಹಿಳೆ. ಇವರು ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಎರಡು ದಿನದ ಬಳಿಕ ಬಾಣಂತಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯವಿಲ್ಲವೆಂದು ವೈದ್ಯರು ಹೇಳಿದ ಹಿನ್ನಲೆ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಮೃತಪಟ್ಟಿದ್ದಾರೆ.

ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸಿಸೇರಿಯನ್ ಮಾಡುವ ವೇಳೆ ವೈದ್ಯರು ಬಿ.ಪಿ., ಶುಗರ್ ಪರೀಕ್ಷೆ ಮಾಡಿಲ್ಲವೆಂದು ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News