×
Ad

ಚಿಕ್ಕಮಗಳೂರು: ಲಾರಿ-ಬೈಕ್ ಢಿಕ್ಕಿ; ಮಹಿಳೆ ಮೃತ್ಯು

Update: 2024-03-23 13:56 IST

ಚಿಕ್ಕಮಗಳೂರು: ಲಾರಿ-ಬೈಕ್ ನಡುವಿನ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ  ಮೃಪಟ್ಟಿರುವ ಘಟನೆ ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ

ಮೃತ ಮಹಿಳೆಯನ್ನು ದಾವಣಗೆರೆ ಎಎಸ್ಪಿ ಗನ್ ಮ್ಯಾನ್ ಜಯಣ್ಣ ಅವರ ಪತ್ನಿ ಸುಮಾ (25) ಎಂದು ಗುರುತಿಸಲಾಗಿದೆ.

ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ ಪತ್ನಿ ಜೊತೆ ಬೈಕಿನಲ್ಲಿ ರೈಲ್ವೆ ಸ್ಟೇಷನ್ ಗೆ ಹೋಗುತ್ತಿರುವಾಗ, ಒನ್ ವೇ ನಲ್ಲಿ ಬಂದ ಲಾರಿ ಬೈಕ್‌ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಜಯಣ್ಣ ಅವರ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News