×
Ad

ಚಿಕ್ಕಮಗಳೂರು: ಭದ್ರಾ ನದಿ ಮಧ್ಯೆ ಸಿಲುಕಿದ್ದ ದನಗಳ ರಕ್ಷಣೆ

Update: 2024-07-24 12:37 IST

ಚಿಕ್ಕಮಗಳೂರು: ಭದ್ರಾ ನದಿ ಮಧ್ಯೆ ಸಿಲುಕಿದ್ದ ದನಗಳ ರಕ್ಷಣೆ ಮಾಡಲಾದ ಘಟನೆ ನರಸಿಂಹರಾಜ ಪುರ ತಾಲೂಕಿನ ಹೊನ್ನೆಕೊಡಿಗೆ ಸಾಲೂರು ಬಳಿ ನಡದಿದೆ.

ನದಿ ಮಧ್ಯದ ದ್ವೀಪದಂತಹ ಸ್ಥಳದಲ್ಲಿ ದನಗಳು ಸಿಲುಕಿಕೊಂಡಿದ್ದು ಭದ್ರಾ ಹುಲಿ ಸಂರಕ್ಷಿತಾರಣ್ಯದ ಸಿಬ್ಬಂದಿ ಹಾಗೂ ಸ್ಥಳೀಯರು ಬೋಟ್ ಬಳಸಿ ದನಗಳನ್ನು ರಕ್ಷಣೆ ಮಾಡಿದ್ದಾರೆ.

ಸಾಲೂರು ಸಮೀಪ ದ್ವೀಪದಂತಹ ಸ್ಥಳಕ್ಕೆ ದನಗಳು ಮೇಯಲು ತೆರಳಿದ್ದು, ಬೋಟ್ ಮೂಲಕ ತೆರಳಿದ ಸಿಬ್ಬಂದಿ ಹಾಗೂ ಸ್ಥಳೀಯರು ದನಗಳನ್ನು ಹೆದರಿಸಿ ದಡ ಸೇರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News