ಬಾಳೆಹೊನ್ನೂರು | ಕಾಡಾನೆ ದಾಳಿಗೆ ರೈತ ಬಲಿ
Update: 2025-07-27 21:21 IST
ಚಿಕ್ಕಮಗಳೂರು : ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿರುವ ಘಟನೆ ಎನ್‌ಆರ್‌ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬನ್ನೂರು ಎಂಬಲ್ಲಿ ನಡೆದಿದೆ.
ಸುಬ್ಬೇಗೌಡ ಎಂಬವರು ಕಾಡಾನೆಗೆ ದಾಳಿಗೆ ಬಲಿಯಾದ ರೈತ. ಗ್ರಾಮ ಸಮೀಪದ ತಮ್ಮತೋಟಕ್ಕೆ ಹೋಗಿದ್ದ ವೇಳೆ ತೋಟದಲ್ಲೇ ಇದ್ದ ಕಾಡಾನೆ ಏಕಾಏಕಿ ಸುಬ್ಬೇಗೌಡರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.
ಕಾಡಾನೆ ರೈತನನ್ನು ಕಾಲಿನಿಂದ ತುಳಿದುಹಾಕಿದ್ದು, ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಎನ್‌ಆರ್‌ಪುರ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು, ಕೆಲ ದಿನಗಳ ಹಿಂದೆ ಬಾಳೆಹೊನ್ನೂರು ಸಮೀಪದ ಗ್ರಾಮದಲ್ಲಿ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿತ್ತು. ಕಾಡಾನೆಗಳ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು, ರೈತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ