ಚಿಕ್ಕಮಗಳೂರು | ಕಬ್ಬಿಣದ ಪೈಪ್‌ನಿಂದ ಹಲ್ಲೆಗೈದ ಪತಿ: ಪತ್ನಿ ಮೃತ್ಯು
Update: 2025-10-29 23:22 IST
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ನಿತ್ಯ ಜಗಳ ಮಾಡುತ್ತಿದ್ದ ಪತ್ನಿಯನ್ನು ಪತಿ ಕಬ್ಬಿಣದ ಪೈಪ್‌ನಿಂದ ಹೊಡೆದು ಸಾಯಿಸಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮಂಜುಳಾ (32) ಮೃತಪಟ್ಟ ಮಹಿಳೆ. ಪತಿಯಿಂದ ಹಲ್ಲೆಗೊಳಗಾಗಿ ರಕ್ತಸ್ರಾವದಿಂದ ಬಳಲುತ್ತಿದ್ದ ಮಂಜುಳಾ ಅವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಯಮಗೊಂಡ ಕಾಫಿತೋಟದ ಕೂಲಿಲೈನ್‌ನಲ್ಲಿ ಮಂಜುಳಾ ಮತ್ತು ಆಕೆಯ ಪತಿ ವಾಸವಿದ್ದು, ಇವರು ನಿತ್ಯ ಜಗಳವಾಡುವುದನ್ನು ನೋಡಿದ ತೋಟದ ರೈಟರ್ ಕೆಲಸಕ್ಕೆ ಬರಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದರು ಎನ್ನಲಾಗಿದೆ.
ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.