×
Ad

ಮೂಡಿಗೆರೆ | ಕ್ರೇನ್ ಹರಿದು ಅಂಗನವಾಡಿ ಶಿಕ್ಷಕಿ ಮೃತ್ಯು

Update: 2025-10-08 14:51 IST

ಚಿಕ್ಕಮಗಳೂರು : ನಿಯಂತ್ರಣ ತಪ್ಪಿದ ಕ್ರೇನ್ ವಾಹನವೊಂದು ಸ್ಕೂಟರ್‌ ಮೇಲೆ ಹರಿದು ಅಂಗನವಾಡಿ ಶಿಕ್ಷಕಿಯೊಬ್ಬರು  ಮೃತಪಟ್ಟಿರುವ ಘಟನೆ ಮೂಡಿಗೆರೆ ಪಟ್ಟಣದ ಹೆಸ್ಗಲ್ ರಸ್ತೆಯಲ್ಲಿ  ನಡೆದಿದೆ.

ಅಂಗನವಾಡಿ ಶಿಕ್ಷಕಿ ಸಂಪ್ರೀತಾ (28) ಮೃತಪಟ್ಟರೆ, ಹಿಂಬದಿಯಲ್ಲಿ ಕುಳಿತಿದ್ದ ವಕೀಲೆ ಸುಜಾತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕ್ರೇನ್‌ನ ತಾಂತ್ರಿಕ ದೋಷ, ಬ್ರೇಕ್ ವಿಫಲತೆ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News