×
Ad

ಮೂಡಿಗೆರೆ: ಅಪರಿಚಿತ ವಾಹನ ಢಿಕ್ಕಿ; ಐದು ದನಗಳು ಸಾವು

Update: 2025-08-09 09:33 IST

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ–ಹೆಬ್ಬರಿಗೆ ರಸ್ತೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಏಳು ದನಗಳು ಗಂಭೀರವಾಗಿ ಗಾಯಗೊಂಡಿದ್ದು, ಅವುಗಳಲ್ಲಿ ಐದು ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

 ರಾತ್ರಿ ವೇಳೆ ಮೋಡ ಕವಿದ ವಾತಾವರಣದಲ್ಲಿ, ರಸ್ತೆಯ ಮೇಲೆ ಮಲಗಿದ್ದ ದನಗಳಿಗೆ ಅಪರಿಚಿತ ವಾಹನವು ಢಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ಬಲೆಗೆ ಸಿಲುಕಿದ ದನಗಳಲ್ಲಿ ಎರಡು ಬದುಕುಳಿದರೂ ಗಂಭೀರ ಗಾಯಗಳಿಂದ ಬಳಲುತ್ತಿವೆ.

ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News