ಮೂಡಿಗೆರೆ: ಬಿರುಗಾಳಿ, ಮಳೆಗೆ ಮನೆ ಮೇಲೆ ಬಿದ್ದ ಮರ; ಮಹಿಳೆ ಗಂಭೀರ
Update: 2025-05-26 10:00 IST
ಚಿಕ್ಕಮಗಳೂರು, ಮೇ 26: ಕಳೆದ ರಾತ್ರಿ ಬಿರುಗಾಳಿ ಸಹಿತ ಮಳೆ ಸಂಭವಿಸಿದ್ದು, ತೋಟ ಕಾರ್ಮಿಕರ ಲೈನ್ ಮನೆಯ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದು ಗಂಭೀರ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿನ ಬಾಳೂರು ಎಸ್ಟೇಟ್‌ನಲ್ಲಿ ನಡೆದಿದೆ.
ಮನೆಯೊಳಗೆ ನಿದ್ದೆ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಸುನಂದಾ ಮರದ ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ತಕ್ಷಣವೇ ಬಣಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ.
ಬಿರುಗಾಳಿ ಮಳೆಯ ತೀವ್ರತೆಗೆ ಎಸ್ಟೇಟ್‌ನ ಹಲವು ಭಾಗಗಳಲ್ಲಿ ಹಾನಿಯಾಗಿದ್ದು, ಮರಗಳು ಹಾಗೂ ತಾಳೆಗಳು ನೆಲಕ್ಕುರುಳಿವೆ. ಸ್ಥಳೀಯ ಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.