ಮೂಡಿಗೆರೆ | ಎತ್ತಿನಭುಜ ಚಾರಣಕ್ಕೆ ಒಂದು ತಿಂಗಳ ಕಾಲ ನಿಷೇಧ
Update: 2025-07-01 11:47 IST
ಎತ್ತಿನಭುಜ
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಎತ್ತಿನಭುಜಕ್ಕೆ ಚಾರಣ ತೆರಳುವುದಕ್ಕೆ ಒಂದು ತಿಂಗಳ ಕಾಲ ನಿಷೇಧ ಹೇರಲಾಗಿದೆ.
ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ, ಕಾಡುಪ್ರಾಣಿಗಳ ಕಾಟದಿಂದ, ಅಪಾಯ ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಘಟನಾ ಸ್ಥಳಕ್ಕೆ ತೆರಳಲು ಕಷ್ಟಸಾಧ್ಯವಾಗಿರುತ್ತದೆ.
ಆದ್ದರಿಂದ ಮುಂಜಾಗೃತ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯ ಉಂಟಾಗದಂತೆ ಪ್ರವಾಸಿಗರ ಹಿತದೃಷ್ಟಿಯಿಂದ ಚಾರಣಕ್ಕೆ ಒಂದು ತಿಂಗಳ ಕಾಲ ನಿಷೇಧ ಹೇರಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.