×
Ad

ಎಸ್ ವೈಎಸ್ ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2025-04-25 10:41 IST

ಚಿಕ್ಕಮಗಳೂರು: ಸುನ್ನೀ ಯುವಜನ ಸಂಘ (ಎಸ್ ವೈಎಸ್) ಚಿಕ್ಕಮಗಳೂರು ಜಿಲ್ಲಾ ಸಮಿತಿಯ ಮಹಾಸಭೆಯು ಉಪ್ಪಳ್ಳಿಯಲ್ಲಿ ಎ.22ರಂದು ನಡೆಯಿತು.

ರಾಜ್ಯ ವೀಕ್ಷಕರಾದ ಸಂಘದ ರಾಜ್ಯ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕಿ ಉಸ್ತಾದರ ಮೇಲುಸ್ತುವಾರಿಯಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಾಗುಂಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸೈಯದ್ ಹಾಮೀಮ್ ತಂಙಳ್ ಬಾಳೆಹೊನ್ನೂರು ದುಆಗೈದರು. ಈ ವೇಳೆ ನೂತನ ಸಾಲಿಗೆ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

 

ಅದ್ಯಕ್ಷರಾಗಿ ಸೈಯದ್ ಹಾಮೀಮ್ ತಂಙಳ್ ಬಾಳೆಹೊನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್ ಶೆಟ್ಟಿಕೊಪ್ಪ, ಕೋಶಾಧಿಕಾರಿಯಾಗಿ ಉಸ್ಮಾನ್ ಹಂಡುಗುಳಿ, ಉಪಾಧ್ಯಕ್ಷರಾಗಿ ಸಫ್ವಾನ್ ಸಖಾಫಿ ಬಾಳೆಹೊನ್ನೂರು(ದಅವಾ ಟ್ರೈನಿಂಗ್), ಸುಲೈಮಾನ್ ಶೆಟ್ಟಿಕೊಪ್ಪ(ಸಂಘಟನೆ), ನಝೀರ್ ಅಹ್ಮದ್ ಉಪ್ಪಳ್ಳಿ(ಸಾಂತ್ವನ ಇಸಾಬಾ), ಅಬ್ದುಲ್ ಅಝೀಝ್ ಮಾಗುಂಡಿ(ಸೋಶಿಯಲ್), ಝೈನುಲ್ ಆಬಿದೀನ್ ಸಖಾಫಿ ಮಾಗುಂಡಿ(ಮೀಡಿಯಾ ಮತ್ತು ಐಟಿ), ಕಾರ್ಯದರ್ಶಿಯಾಗಿ ಇಲ್ಯಾಸ್ ಬಹಸನಿ ಹಂಡುಗುಳಿ(ದಅವಾ ಟ್ರೈನಿಂಗ್), ಅಬ್ದುಲ್ ಖಾದರ್ ತರೀಕೆರೆ ಬಿ. (ಸಂಘಟನೆ), ಮುಸ್ತಫಾ ಝುಹುರಿ ಶಾಂತಿ ನಗರ(ಸಾಂತ್ವನ ಇಸಾಬಾ), ಇಬ್ರಾಹಿಂ ಮಸೀದಿ ಕೆರೆ(ಸೋಶಿಯಲ್), ಅಶ್ರಫ್ ಝೈನಿ ಕಡಬಗೆರೆ(ಮೀಡಿಯಾ ಮತ್ತು ಐಟಿ) ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅಬ್ದುಲ್ ಹಾರಿಸ್ ಕಿತ್ತಳೆಗಂಡಿ, ಸೈಯದ್ ಅಲಿ ಟೌನ್, ಶಂಸುದ್ದೀನ್ ಸಖಾಫಿ ಶಾಂತಿ ನಗರ, ಕಲಂದರ್ ಸಖಾಫಿ ಕಲ್ಲೊಡ್ಡಿ, ಹುಸೈನ್ ಕಲ್ಲೊಡ್ಡಿ, ಅಶ್ರಫ್ ಕೊಗ್ರೆ, ಸಿದ್ದೀಕ್ ಕಡಬಗೆರೆ, ಕಲಂದರ್ ಕಡಬಗೆರೆ, ಮುಸ್ತಫ ಶೆಟ್ಟಿಕೊಪ್ಪ, ಸಾದಿಕ್ ಶೃಂಗೇರಿ, ಫಾರೂಕ್ ಸಣ್ಣಕೆರೆ, ಹುಸೈನ್ ಸಅದಿ ಕೊಪ್ಪ, ಸಾದಿಕ್ ಪಾಷಾ ತರೀಕೆರೆ, ಅಬ್ದುಲ್ ಖಾದರ್ ತರೀಕೆರೆ, ಅಬ್ದುಲ್ ಕಬೀರ್ ತರೀಕೆರೆ, ರಶೀದ್ ಜಯಪುರ, ಇಬ್ರಾಹೀಂ ಕೆ.ಎಂ. ಮೂಡಿಗೆರೆ ಅವರನ್ನು ಆರಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News