×
Ad

ಯುಗಾದಿಯ ಸಂಭ್ರಮದ ನಡುವೆ ಬಾಕ್ಸ್ ಆಫೀಸ್ ನಲ್ಲಿ ಯಶ್ vs ರಣವೀರ್ ಸಿಂಗ್!

Update: 2026-02-03 17:08 IST

Photo source: X

‘ಧುರಂಧರ್’ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜ ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಟೀಸರ್ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿ ಮಾರ್ಚ್ 19ರಂದೇ ಬಿಡುಗಡೆಯಾಗುವ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಟೀಸರ್ ಕೂಡ ಬಿಡುಗಡೆಯಾಗಿದೆ.

ಧುರಂಧರ್ ಸೀಕ್ವೆಲ್ ಟೀಸರ್ ಬಿಡುಗಡೆ

ಹೊಸ ದಾಖಲೆ ಬರೆದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಟೀಸರ್ ಇಂದು ಬಿಡುಗಡೆಯಾಗಿದೆ. ಮೊದಲ ಭಾಗದ ಯಶಸ್ಸಿನ ಕಾರಣದಿಂದ ಎರಡನೇ ಭಾಗದ ಯಶಸ್ಸಿನ ನಿರೀಕ್ಷೆಗಳನ್ನು ಮೂಡಿಸಿದೆ. ಆದರೆ ವಿಶೇಷವೆಂದರೆ ಈ ಸೀಕ್ವೆಲ್ ಸಿನಿಮಾ ಬಿಡುಗಡೆಯಾಗುವ ದಿನವೇ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ಸಿನಿಮಾಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಬಹು ನಿರೀಕ್ಷಿತ ಸೀಕ್ವೆಲ್ನಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಡುವೆ ದೊಡ್ಡ ಸಮರಕ್ಕೆ ವೇದಿಕೆ ಸಿದ್ಧವಾಗಿದೆ.

ಯುಗಾದಿಯಂದು ಬಿಡುಗಡೆಯಾಗುವ ‘ಟಾಕ್ಸಿಕ್’

ಇತ್ತ ‘ಟ್ಯಾಕ್ಸಿಕ್’ ಸಿನಿಮಾದಲ್ಲಿ ಯಶ್ ನಾಯಕರಾಗಿ ನಟಿಸಿದ್ದು, ಮಹಿಳಾ ನಟಿಯರ ಸಾಲೇ ಇದೆ. ಚಿತ್ರದಲ್ಲಿ ಗೀತು ಮೋಹನ್ ದಾಸ್ ನಿರ್ದೇಶನವಿದೆ. ಕಿಯಾರಾ ಆಡ್ವಾಣಿ, ನಯನತಾರ, ಹುಮಾ ಖುರೇಶಿ, ತಾರಾ ಸುತೈರಾ, ರುಕ್ಮಿಣಿ ವಸಂತ್ ಮೊದಲಾದವರು ಸಿನಿಮಾದಲ್ಲಿ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಲ್ಲಿ ಚಿತ್ರೀಕರಿಸಲಾಗಿದ್ದು, ನಂತರ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿದೆ.

2026 ಮಾರ್ಚ್ 19ರಂದು ‘ಟ್ಯಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಆದಿತ್ಯ ಧರ್ ನಿರ್ದೇಶನದ “ಧುರಂಧರ್: ದಿ ರಿವೆಂಜ್’” ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡು ದಿಗ್ಗಜರ ಸಿನಿಮಾಗಳು ಒಂದೇ ದಿನ ʼಕ್ಲ್ಯಾಷ್ʼ ಆಗಲಿದೆ.

ಅಭೂತಪೂರ್ವ ಗಳಿಕೆಯ ದಾಖಲೆ

2025 ಡಿಸೆಂಬರ್ 5ರಂದು ಬಿಡುಗಡೆಯಾದ ‘ಧುರಂಧರ್’ ಮೊದಲ ಭಾಗವು 56 ದಿನಗಳಲ್ಲಿ ವಿಶ್ವಾದ್ಯಂತ 1,347 ಕೋಟಿ ರೂ. ಮೀರಿ ಗಳಿಕೆ ಮಾಡಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕರಾಗಿ ನಟಿಸಿದ್ದು, ಸಂಜಯ್ ದತ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಆರ್ ಮಾಧವನ್ ಸೇರಿದಂತೆ ಖ್ಯಾತ ನಟರು ನಟಿಸಿದ್ದರು. ಸದ್ಯ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದ್ದು, ಎರಡನೇ ಭಾಗದ ಟೀಸರ್ ಬಿಡುಗಡೆಯಾಗಿದೆ.

ಸೀಕ್ವೆಲ್ನಲ್ಲಿ ನಿರ್ದೇಶಕ ಆದಿತ್ಯ ಧರ್ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಈ ಬಾರಿ ಡಿಜಿಟಲ್ ಹಕ್ಕುಗಳನ್ನು ‘ಜಿಯೋ ಹಾಟ್ಸ್ಟಾರ್’ ಖರೀದಿಸಿದೆ. ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ 2026 ಮೇ 16ರಂದು ಒಟಿಟಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News