×
Ad

21 ನಿಮಿಷದಲ್ಲಿ 24 ಲಕ್ಷ ವೀಕ್ಷಣೆ ಪಡೆದ ʼಲಿಯೋʼ ಟ್ರೈಲರ್‌

Update: 2023-10-05 19:13 IST

photo - twitter@iammoviebuff007

ಚೆನ್ನೈ: ತಮಿಳಿನ ಯಶಸ್ವಿ ನಿರ್ದೇಶಕ ಲೋಕೇಶ್‌ ಕನಗರಾಜ್‌ ಹಾಗೂ ನಟ ವಿಜಯ್‌ ಅವರ ಬಹುನಿರೀಕ್ಷಿತ ʼಲಿಯೋʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಭರ್ಜರಿ ಸ್ವಾಗತವನ್ನು ಪಡೆದಿದೆ. ಕೇವಲ 21 ನಿಮಿಷದಲ್ಲಿ 24 ಲಕ್ಷ ವೀಕ್ಷಣೆಯನ್ನು ಚಿತ್ರದ ಟ್ರೈಲರ್‌ ಪಡೆದುಕೊಂಡಿದೆ.

ಮಾನಗರಂ, ಕೈದಿ ಹಾಗೂ ವಿಕ್ರಮ್‌ ಚಿತ್ರಗಳ ಹ್ಯಾಟ್ರಿಕ್‌ ಗೆಲುವಿನಲ್ಲಿರುವ ಲೋಕೇಶ್‌ ಕನಗರಾಜ್‌ ಅವರ ಲಿಯೋ ಚಿತ್ರದ ಮೇಲೆ ವಿಪರೀತ ನಿರೀಕ್ಷೆ ಇದೆ. ನಟ ವಿಜಯ್‌ ಅವರ ಕೊನೆಯ ಎರಡು ಚಿತ್ರಗಳಾದ ʼಬೀಸ್ಟ್‌ʼ ಮತ್ತು ʼವಾರಿಸುʼ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯದೆ ಇರುವುದರಿಂದ ಲಿಯೋ ಚಿತ್ರ ದೊಡ್ಡಮಟ್ಟದಲ್ಲಿ ಗೆಲ್ಲುವುದು ಅವರಿಗೆ ಅನಿವಾರ್ಯವಾಗಿದೆ.

ಚಿತ್ರದಲ್ಲಿ ಸಂಜಯ್‌ ದತ್‌, ಅರ್ಜುನ್‌ ಸರ್ಜಾ, ತ್ರಿಷಾ ಕೃಷ್ಣನ್‌, ಮನ್ಸೂರ್‌ ಖಾನ್‌, ಗೌತಮ್‌ ಮೆನನ್‌ ಸೇರಿದಂತೆ ಭಾರೀ ದೊಡ್ಡ ತಾರಾಗಣವಿದೆ.

ಅನಿರುದ್ಧ್‌ ರವಿಚಂದರ್‌ ಸಂಗೀತ ಇರುವ ಈ ಚಿತ್ರವನ್ನು ಲಲಿತ್‌ ಕುಮಾರ್‌ ನಿರ್ಮಾಣ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News