×
Ad

ಬಾಲಿವುಡ್‌ ಅಬ್ಬರ, ಮಲಯಾಳಂ ಸಿನಿಮಾ ಪ್ರಾಯೋಗಿಕ: ದುಲ್ಕರ್ ಸಲ್ಮಾನ್

Update: 2025-12-05 17:56 IST

ದುಲ್ಕರ್ ಸಲ್ಮಾನ್ | Photo Credit : X

ಭಾರತೀಯರು ದುಲ್ಕರ್ ಅವರನ್ನು ಯಶಸ್ವೀ ನಟ ಮತ್ತು ಸೂಪರ್‌ ಸ್ಟಾರ್‌ ಮಗನೆಂದೇ ನೋಡುತ್ತಾರೆ. ಆದರೆ ಅವರ ಆರಂಭಿಕ ದಿನಗಳು ಹೆಚ್ಚು ಸುಂದರವಾಗಿರಲಿಲ್ಲ ಎನ್ನುವುದನ್ನು ಇತ್ತೀಚೆಗೆ ಅವರು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಲಯಾಳಂ ಸಿನಿಮಾದ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ 2025ರಲ್ಲಿ ಎರಡು ಯಶಸ್ವೀ ಸಿನಿಮಾಗಳನ್ನು ನೀಡಿ ಭಾರತೀಯ ಸಿನಿಮಾ ರಂಗದ ಮೇಲೆ ತಮ್ಮ ಪ್ರಾಬಲ್ಯವನ್ನು ಮತ್ತೆ ತೋರಿಸಿದ್ದಾರೆ. ‘ಕಾಂತಾ’ ಚಿತ್ರದಲ್ಲಿ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಸ್ವಂತ ನಿರ್ಮಾಣದ ಬಹುತೇಕ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿರುವ ‘ಲೋಕ ಅಧ್ಯಾಯ 1: ಚಂದ್ರ’ ಸಿನಿಮಾ ಜಾಗತಿಕವಾಗಿ ರೂ 300 ಕೋಟಿ ಕಬಳಿಸಿದೆ.

ಅವರು ಮಲಯಾಳಂನ ಪ್ರಸಿದ್ಧ ನಟ ಮಮ್ಮುಟ್ಟಿ ಅವರ ಮಗನಾಗಿದ್ದರೂ, ನಾಲ್ಕು ಚಿತ್ರರಂಗಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಛಾಪನ್ನು ಬೀರಿದ್ದಾರೆ. ಹಿಂದಿ ಸಿನಿಮಾ ‘ಕಾರ್ವಾನ್‌’ ಮೂಲಕ ದುಲ್ಕರ್ ಸಲ್ಮಾನ್ ಮಲಯಾಳಂನಲ್ಲಿ ಹೆಸರು ಮಾಡಿದವರು. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರ ಇತ್ತಿಚೆಗಿನ ‘ಕಾಂತಾ’ ಮೂಲತಃ ತಮಿಳು ಭಾಷೆಯ ಸಿನಿಮಾ.

ಭಾರತೀಯರು ದುಲ್ಕರ್ ಅವರನ್ನು ಯಶಸ್ವೀ ನಟ ಮತ್ತು ಸೂಪರ್‌ ಸ್ಟಾರ್‌ ಮಗನೆಂದೇ ನೋಡುತ್ತಾರೆ. ಆದರೆ ಅವರ ಆರಂಭಿಕ ದಿನಗಳು ಹೆಚ್ಚು ಸುಂದರವಾಗಿರಲಿಲ್ಲ ಎನ್ನುವುದನ್ನು ಇತ್ತೀಚೆಗೆ ಅವರು ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. “ಬಾಲಿವುಡ್‌ನಲ್ಲಿ ಆರಂಭಿಕ ದಿನಗಳು ಚೆನ್ನಾಗಿರಲಿಲ್ಲ ಹಿಂದಿ ಸಿನಿಮಾಗಳಿಂದ ಹೊರ ತಳ್ಳಲಾಗಿತ್ತು’ ಎನ್ನುವ ವಿವರವನ್ನು ಅವರು ಹಂಚಿಕೊಂಡಿದ್ದಾರೆ.

ಬಾಲಿವುಡ್‌ ಸೆಟ್‌ಗಳಲ್ಲಿ ಸ್ಥಳ ಮತ್ತು ಗೌರವ ಗಳಿಸಬೇಕಾದರೆ ಯಶಸ್ಸು ಮುಖ್ಯ ಮತ್ತು ದೊಡ್ಡ ತಾರೆ ಎನ್ನುವ ಭ್ರಮೆಯನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಕಲಿತುಕೊಂಡಿರುವುದಾಗಿ ಅವರು ಹೇಳಿದ್ದಾರೆ.

“ಒಬ್ಬ ನಟ ತನ್ನ ಪರಿವಾರ ಮತ್ತು ಅಭಿಮಾನಿಗಳ ಜೊತೆಗೆ ಬಾರದೆ ಇದ್ದರೆ ಆತನಿಗೆ ಬಾಲಿವುಡ್‌ನಲ್ಲಿ ಗೌರವ ಸಿಗದು. ಬಾಲಿವುಡ್‌ನಲ್ಲಿ ಇಮೇಜ್ ಮುಖ್ಯವಾಗುತ್ತದೆ. ದೊಡ್ಡ ಐಷಾರಾಮಿ ಕಾರಿನಲ್ಲಿ ಬರುವುದು ಮತ್ತು ಅಸಿಸ್ಟಂಟ್‌ಗಳನ್ನು ಸುತ್ತಮುತ್ತ ಇರಿಸಿಕೊಳ್ಳುವುದು ಮುಖ್ಯವಾಗುತ್ತದೆ” ಎಂದು ದುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ದುಲ್ಕರ್ ಪ್ರಕಾರ ಮಲಯಾಳಂ ಸಿನಿಮಾ ಪ್ರಾಯೋಗಿಕ ಮತ್ತು ಯಾವುದೇ ಅಲಂಕಾರಗಳಿಲ್ಲದ ಚಿತ್ರರಂಗ ಎಂದು ಬಣ್ಣಿಸಿದ್ದಾರೆ. ಮಲಯಾಳಂನಲ್ಲಿ ಕುಟುಂಬ ಮುಖ್ಯವಾಗುವುದಿಲ್ಲ. ಬಹಳಷ್ಟು ವಿಷಯಗಳನ್ನು ನಟರು ಸ್ವತಃ ನಿರ್ವಹಿಸುತ್ತಾರೆ. ವ್ಯಾನಿಟಿ ವ್ಯಾನ್‌ಗಳು ಇರುವುದು ಅಪರೂಪ. ಸಿನಿಮಾ ಚಿತ್ರೀಕರಣವಾಗುವ ಸ್ಥಳದಲ್ಲಿ ಸಮೀಪದ ಮನೆಗಳಲ್ಲಿಯೇ ಉಡುಗೆ ತೊಡಲು ಅವಕಾಶವಿರುತ್ತದೆ. ಮಲಯಾಳಂ ಸಿನಿಮಾಗಳಲ್ಲಿ ಕಲಾವಿದರು ವೆಚ್ಚವನ್ನು ಕಡಿತ ಮಾಡುವ ಕಡೆಗೆ ಗಮನಕೊಡುತ್ತಾರೆ. ನಿರ್ಮಾಪಕರ ಮೇಲೆ ಹೆಚ್ಚು ಹೊರೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.

ದುಲ್ಕರ್ ಏಕಾಂಗಿಯಾಗಿ ಓಡಾಟ, ಸರಳವಾದ ಜೀವನವನ್ನು ಬಯಸುವುದಾಗಿ ಹೇಳಿದ್ದಾರೆ. “ಚಿತ್ರೀಕರಣಕ್ಕಾಗಿ ಏಕಾಂಗಿಯಾಗಿ ಹೋಗುತ್ತೇನೆ. ನಾನೇ ಬ್ಯಾಗ್‌ಗಳನ್ನು ಪ್ಯಾಕ್ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News