×
Ad

ಬಾಲಿವುಡ್ ನಲ್ಲಿ ಸೀಕ್ವೆಲ್ ಗಳು ವಿಫಲವಾಗಲು ಕಾರಣವೇನು?

Update: 2025-12-03 19:04 IST

ಭಾವನಾತ್ಮಕ ಸಂಪರ್ಕ, ಪರಿಚಿತ ಪಾತ್ರಗಳು ಪದೇಪದೆ ಗೆಲುವನ್ನು ತರುವ ನಿರೀಕ್ಷೆ ಕೈಗೂಡದು. ಮುಖ್ಯವಾಗಿ ಬಲವಾದ ಚಿತ್ರಕತೆಗಳು ಮತ್ತು ಸೃಜನಶೀಲತೆ, ಸ್ವಂತಿಕೆಯೇ ಗೆಲುವಿನ ಮೂಲ ಎಂದರೆ ತಪ್ಪಾಗದು.

ಕೋವಿಡ್ ನಂತರ ಬಾಲಿವುಡ್ ಮುಖ್ಯವಾಗಿ ಸೀಕ್ವೆಲ್ಗಳ ಮೇಲೆಯೇ ಅವಲಂಬನೆಗೊಂಡಿತ್ತು. ಭೂಲ್ ಬುಲಯ್ಯ 2 ಮತ್ತು 3, ಗದರ್ 2, ದೃಶ್ಯಂ 2 ಅಥವಾ ಸ್ತ್ರೀ 2 ಮೊದಲಾದ ಸಿನಿಮಾಗಳು ಕೋಟಿಗಟ್ಟಲೆ ಬಾಚಿ ಬಾಲಿವುಡ್ಗೆ ಹೊಸ ಅವಲಂಬನೆಯೊಂದನ್ನು ನೀಡಿತ್ತು. ಮೂಲ ಸಿನಿಮಾಗಳಿಗಿಂತಲೂ ಹೆಚ್ಚು ಯಶಸ್ಸನ್ನು ಸೀಕ್ವೆಲ್ಗಳು ಸಾಧಿಸುತ್ತಿರುವಾಗ ಹೊಸ ಕತೆಯ ಅಗತ್ಯ ಕಂಡುಬಂದಿರಲಿಲ್ಲ. ಹೀಗಾಗಿ ಬಹುತೇಕ ನಿರ್ದೇಶರು ಹಳೇ ಲೋಟಕ್ಕೆ ಹೊಸ ಶರಬತ್ತು ಹಾಕಿ ಕೊಡಲು ಪ್ರಾರಂಭಿಸಿದರು.

ಆದರೆ 2025ರಲ್ಲಿ ಈ ಅವಲಂಬನೆಯಿಂದ ಯಶಸ್ಸು ಗಳಿಸಬಹುದೆಂಬುದು ಹುಸಿಯಾಗಿದೆ. ರೈಡ್ 2 ಮತ್ತು ʼಸಿತಾರೆ ಝಮೀನ್ ಪರ್ʼನಂತಹ ಒಂದೆರಡು ಸಿನಿಮಾಗಳು ಅಲ್ಪಮಟ್ಟಿಗೆ ಯಶಸ್ಸು ಕಂಡದ್ದು ಹೊರತುಪಡಿಸಿ ಇನ್ನೆಲ್ಲಾ ಸೀಕ್ವೆಲ್ಗಳು ತನ್ನ ಹಿಂದಿನ ಸಿನಿಮಾಗೆ ಸಿಕ್ಕಿದ ಯಶಸ್ಸನ್ನು ಪುನರಾವರ್ತಿಸಲಿಲ್ಲ.

ಬದಲಾವಣೆ ಬಯಸುವ ಪ್ರೇಕ್ಷಕರು

ಮುಖ್ಯವಾಗಿ ಸಿನಿ ಪ್ರೇಕ್ಷಕರು ಬದಲಾವಣೆ ಬಯಸುತ್ತಾರೆ. ಯಶೋಗಾಥೆ ನಿರಂತರವಾಗಿ ಇರುತ್ತದೆ ಎಂದುಕೊಳ್ಳುವುದು ಸರಿಯಲ್ಲ. ಬ್ರ್ಯಾಂಡ್ ಮರುಸ್ಥಾಪನೆ ಯಶಸ್ಸನ್ನು ಖಾತರಿಪಡಿಸುವುದಿಲ್ಲ. ಭಾವನಾತ್ಮಕ ಸಂಪರ್ಕ, ಪರಿಚಿತ ಪಾತ್ರಗಳು ಪದೇಪದೆ ಗೆಲುವನ್ನು ತರುವ ನಿರೀಕ್ಷೆ ಕೈಗೂಡದು. ಮುಖ್ಯವಾಗಿ ಬಲವಾದ ಚಿತ್ರಕತೆಗಳು ಮತ್ತು ಸೃಜನಶೀಲತೆ, ಸ್ವಂತಿಕೆಯೇ ಗೆಲುವಿನ ಮೂಲ ಎಂದರೆ ತಪ್ಪಾಗದು.

2025ರತ್ತ ಒಂದು ಗಮನಹರಿಸಿದರೆ ಬಾಲಿವುಡ್ನ ಸೀಕ್ವೆಲ್ ಸಿನಿಮಾಗಳು ನೂರು ಕೋಟಿಯ ಗಡಿ ದಾಟಲು ಕಷ್ಟಪಟ್ಟಿವೆ. ರೈಡ್ 2 ರೂ 173.44 ಕೋಟಿ ಮತ್ತು ಸಿತಾರೆ ಝಮೀನ್ ಪರ್ ರೂ 167.46 ಕೋಟಿ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಸಿನಿಮಾಗಳು ಹಿಂದಿನ ಸಿನಿಮಾದ ಯಶಸ್ಸನ್ನು ಮರುಕಳಿಸಲು ವಿಫಲವಾಗಿವೆ.

ಯಶಸ್ಸು ಮರುಕಳಿಸಲು ವಿಫಲವಾದ ಸಿನಿಮಾಗಳು.

ಬಡಾಸ್ ರವಿಕುಮಾರ್ – ರೂ 8.55, ಕೋಟಿ ಕೇಸರಿ ಚಾಪ್ಟರ್ 2 – ರೂ 92.74 ಕೋಟಿ, ರೈಡ್ 2 – ರೂ 173.44 ಕೋಟಿ, ಹೌಸ್‌ಫುಲ್ 5 – ರೂ 183.38 ಕೋಟಿ, ಸಿತಾರೆ ಝಮೀನ್ ಪರ್ (SZP) – ರೂ 167.46 ಕೋಟಿ, ಮೆಟ್ರೋ…ಇನ್ ದಿನೋ – ರೂ 53.37 ಕೋಟಿ, ಧಡಕ್ 2 – ರೂ 23.42 ಕೋಟಿ, ಸನ್ ಆಫ್ ಸರ್‌ದಾರ್ 2 – ರೂ 47.03 ಕೋಟಿ, ಅಂದಾಜ್ 2 – ರೂ 53 ಲಕ್ಷ, ವಾರ್ 2 – ರೂ 236.55 ಕೋಟಿ, ಭಾಗಿ 4 – ರೂ 53.38 ಕೋಟಿ, ದೇ ದೇ ಪ್ಯಾರ್‌ ದೇ 2 – ರೂ 71.45 ಕೋಟಿ, ಜಾಲಿ ಎಲ್‌ಎಲ್‌ಬಿ 3 – ರೂ 117.5 ಕೋಟಿ, ಮಸ್ತಿ 4 – ರೂ 14.66 ಕೋಟಿ.

ಮೇಲ್ನೋಟಕ್ಕೆ ಕೆಲವೊಂದು ಸಿನಿಮಾಗಳು ಬಾಚಿದ ಹಣವನ್ನು ನೋಡಿದರೆ ಯಶಸ್ಸು ಕಂಡಿದೆ ಎನ್ನುವ ಭಾವನೆ ಬರಬಹುದು. ಆದರೆ ಈ ಸೀಕ್ವೆಲ್‌ಗಳು ತಮ್ಮ ಮೊದಲಿನ ಸಿನಿಮಾದ ಯಶಸ್ಸನ್ನು ಮರುಕಳಿಸಲು ವಿಫಲವಾಗಿವೆ ಎನ್ನುವುದನ್ನು ಗಮನದಲ್ಲಿರಿಸಬೇಕು.

ಕೃಪೆ: Times of India

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News