×
Ad

ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ICU ನಲ್ಲಿ ಚಿಕಿತ್ಸೆ

Update: 2026-06-06 14:09 IST

ಸಲೀಂ ಕುಮಾರ್ (Photo source: keralakaumudi.com)

ಎರ್ನಾಕುಲಂ: ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

ಅವರು ಕೆಲವು ವರ್ಷಗಳಿಂದ ಯಕೃತ್ತಿಗೆ ಸಂಬಂಧಿತ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಅನಾರೋಗ್ಯದ ನಡುವೆಯೂ ಅವರು ಇತ್ತೀಚೆಗೆ ನಡೆದ ಕೇರಳ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಯುಡಿಎಫ್ ಪರ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದ ಅವರು, ಎಲ್ ಡಿಎಫ್‌ ನಾಯಕತ್ವವನ್ನು ಟೀಕಿಸಿದ್ದರು.

ನಟ ಸಲೀಂ ಕುಮಾರ್ ಕೊನೆಯದಾಗಿ 'ಭಾ ಭಾ ಬಾ' ಮತ್ತು 'ಆಝಾದಿ' ಎಂಬ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮಲಯಾಳಂ ಚಿತ್ರರಂಗದಲ್ಲಿ ವೈವಿಧ್ಯಮಯ ಹಾಸ್ಯ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿ ಮಿಂಚಿದ್ದಾರೆ. ಅವರು ಒಂದು ರಾಷ್ಟ್ರ ಪ್ರಶಸ್ತಿ, ನಾಲ್ಕು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News