×
Ad

‘ಪಬ್ಬಾರ್’ ಸಿನಿಮಾದ ಪಾತ್ರ ಪರಿಚಯಿಸಿದ ಶಿವರಾಜ್ಕುಮಾರ್

Update: 2026-01-15 16:48 IST

Screengrab : X

ಶಾಖಾಹಾರಿ ಸಿನಿಮಾದ ನಿರ್ದೇಶಕ ಸಂದೀಪ್ ಸುಕಂದ್ ಹೊಸ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧೀರೇನ್ ರಾಮ್ಕುಮಾರ್ ಮತ್ತು ಅಮೃತಾ ಪ್ರೇಮ್ ಪ್ರಮುಖ ಪಾತ್ರದಲ್ಲಿದ್ದಾರೆ.

ಗೀತಾ ಶಿವರಾಜ್ ಕುಮಾರ್ ನಿರ್ಮಾಣದ 'ಪಬ್ಬಾರ್' ಚಿತ್ರದ ಪಾತ್ರ ಪರಿಚಯದ ವೀಡಿಯೋವನ್ನು ಚಿತ್ರ ತಂಡ ಗುರುವಾರ ಬಿಡುಗಡೆ ಮಾಡಿದೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

“ದಿಟ್ಟಿಸಿನೋಡಿ… ಬಿರುಗಾಳಿ… ಮೌನ” ಎನ್ನುವ ಬರಹಗಳೊಂದಿಗೆ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಸಂಕ್ರಾಂತಿಯ ಶುಭಾಶಯಗಳ ಜೊತೆಗೆ ಹಿರಿಯ ನಟ ಶಿವರಾಜ್ ಕುಮಾರ್ ‘ಪಬ್ಬಾರ್’ ಸಿನಿಮಾದ ಪಾತ್ರ ಪರಿಚಯದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

‘ಶಾಖಾಹಾರಿ’ ಚಿತ್ರದ ನಿರ್ದೇಶಕ ಸಂದೀಪ್ ಸುಕಂದ್ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಧೀರೇನ್ ರಾಮ್ಕುಮಾರ್ ಮತ್ತು ಅಮೃತಾ ಪ್ರೇಮ್ ಪ್ರಮುಖ ಪಾತ್ರದಲ್ಲಿದ್ದಾರೆ. ಧೀರೇನ್ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಶಿವ 143’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಧಿರೇನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿ ಅಮೃತಾ ಲವ್ಲಿ ಸ್ಟಾರ್ ನಟ ಪ್ರೇಮ್ ಪುತ್ರಿ. ಈಗಾಗಲೇ ‘ಟಗರು ಪಲ್ಯ’ ಸಿನಿಮಾದಲ್ಲಿ ನಟಿಸಿದ್ದಾರೆ.

ಇದೊಂದು ಅಪರಾಧ, ಸಾಹಸ ಥ್ರಿಲ್ಲರ್ ಸಿನಿಮಾ. ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ಪಬ್ಬಾರ್ ನದಿ ಕಣಿವೆ ಇದೆ. ಚಿತ್ರದ ಕತೆಗೂ ಈ ಜಾಗಕ್ಕೂ ಕೊಂಡಿಯಿದೆ ಎಂದು ಚಿತ್ರತಂಡ ಹೇಳಿದೆ. ಈ ಜಾಗವೇ ಚಿತ್ರದ ಕತೆಯ ಕೇಂದ್ರ ಬಿಂದು. ಹೀಗಾಗಿ ಚಿತ್ರಕ್ಕೆ ‘ಪಬ್ಬಾರ್’ ಎಂಬ ಹೆಸರು ಇಟ್ಟಿದ್ದಾರೆ. ಸಿನಿಮಾ ತಂಡ ಮೊದಲು ಮಡಿಕೇರಿಯಲ್ಲಿ ಚಿತ್ರೀಕರಣ ಮುಗಿಸಿ ನಂತರ ಪಬ್ಬಾರ್ ಕಣಿವೆಯಲ್ಲಿ ಚಿತ್ರೀಕರಿಸಿದ್ದಾರೆ.

ಧೀರೇನ್ ಹಾಗೂ ಅಮೃತಾ ಪ್ರೇಮ್ ಪಾತ್ರಗಳ ಸುತ್ತಮುತ್ತ ಸಂಪೂರ್ಣ ಸಿನಿಮಾ ಕಥೆ ಸಾಗಲಿದೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಮಯೂರ್ ಅಂಬೆಕಲ್ಲು ಸಂಗೀತ 'ಪಬ್ಬಾರ್' ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಡ್ಯಾನಿ ಕುಟ್ಟಪ್ಪ ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News