×
Ad

2026 ಗೋಲ್ಡನ್ ಗ್ಲೋಬ್ ಪ್ರಶಸ್ತಿ; ವಿಜೇತರ ಪೂರ್ಣ ವಿವರ

83ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಯಾರಿಗೆ ಗೌರವ ದೊರೆತಿದೆ ಎಂಬ ವಿವರ ಇಲ್ಲಿದೆ

Update: 2026-01-12 16:08 IST

Photo credit :@goldenglobes

2026ರ ಪ್ರತಿಷ್ಠಿತ 83ನೇ 'ಗೋಲ್ಡನ್ ಗ್ಲೋಬ್ ಅವಾರ್ಡ್ಸ್' ಸಮಾರಂಭದಲ್ಲಿ ವಿವಿಧ ಸಿನಿಮಾ ಮತ್ತು ಟೆಲಿವಿಜನ್ ಕಾರ್ಯಕ್ರಮಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸಿನಿಮಾ ಮತ್ತು ಟೆಲಿವಿಜನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಿಸಿದವರಿಗೆ ನೀಡಲಾಗುತ್ತದೆ.

ಈ ಬಾರಿಯ ಅತ್ಯುತ್ತಮ ಸಿನಿಮಾ ನಟ ಪ್ರಶಸ್ತಿಯನ್ನು ‘ದಿ ಸೀಕ್ರೆಟ್ ಏಜೆಂಟ್’ ಚಿತ್ರಕ್ಕೆ ವ್ಯಾಗ್ನರ್ ಮೌರಾ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಗೆ ‘ಟ್ರೈನ್ಸ್ ಡ್ರೀಮ್ಸ್’ ಸಿನಿಮಾಗೆ ಜೋಯೆಲ್ ಎಡ್ಗರ್ಟನ್, ‘ಫ್ರಾಂಕೆನ್ಸ್ಟೇನ್’ಗೆ ಆಸ್ಕರ್ ಐಸಾಕ್, ‘ದಿ ಸ್ಮಾಷಿಂಗ್ ಮಿಷಿನ್’ಗೆ ಡ್ವೇಯ್ನ್ ಜಾನ್ಸನ್, ‘ಸಿನ್ನರ್ಸ್’ಗೆ ಮೈಕೆಲ್ ಬಿ ಜೋರ್ಡನ್, ಸ್ಪ್ರಿಂ’ಗ್ಸ್ಟೀನ್:ಡೆಲಿವರ್ ಮಿ ಫ್ರಮ್ ನೋವೋರ್’ಗೆ ಜೆರೆಮಿ ಅಲೆನ್ ವೈಟ್ ಸ್ಪರ್ಧೆಯಲ್ಲಿದ್ದರು.

ಅತ್ಯುತ್ತಮ ಸಿನಿಮಾ ನಟಿ ಪ್ರಶಸ್ತಿಯನ್ನು ‘ಹ್ಯಾಮ್ನೆಟ್’ ಸಿನಿಮಾಗೆ ಜೆಸ್ಸಿ ಬಕ್ಲೆ ಗೆದ್ದುಕೊಂಡಿದ್ದಾರೆ. ಈ ಪ್ರಶಸ್ತಿಗೆ ‘ಡೈ ಮೈ ಲವ್’ ಚಿತ್ರಕ್ಕೆ ಜೆನ್ನಿಫರ್ ಲಾರೆನ್ಸ್, ‘ಸೆಂಟಿಮೆಂಟಲ್ ವ್ಯಾಲ್ಯೂ’ಗೆ ರೆನೇಟ್ ರೀನ್ಸ್ವ್, ‘ಆಫ್ಟರ್ ದಿ ಹಂಟ್’ಗೆ ಜೂಲಿಯಾ ರಾಬರ್ಟ್ಸ್, ‘ಹೆಡ್ಡಾ’ಗೆ ಟೆಸ್ಸಾ ಥಾಂಪ್ಸನ್, ‘ಸಾರಿ, ಬೇಬಿ’ಗೆ ಇವಾ ವಿಕ್ಟರ್ ಸ್ಪರ್ಧೆಯಲ್ಲಿದ್ದರು.

ಅತ್ಯುತ್ತಮ ಟೆಲಿವಿಜನ್ ಸರಣಿ ಪ್ರಶಸ್ತಿ (ಸಂಗೀತ ಅಥವಾ ಹಾಸ್ಯ)ಯನ್ನು ‘ದ ಸ್ಟುಡಿಯೊ’ ಪಡೆದುಕೊಂಡಿದೆ. ಈ ಪ್ರಶಸ್ತಿಗೆ ‘ಅಬಾಟ್ ಎಲಿಮೆಂಟರಿ’, ‘ದಿ ಬೇರ್, ‘ಹ್ಯಾಕ್ಸ್’, ‘ನೋಬಡಿ ವಾಂಟ್ಸ್ ದಿಸ್’, ಹಾಗೂ ‘ಓನ್ಲಿ ಮರ್ಡರ್ಸ್ ಇನ್ ದಿ ಬಿಲ್ಡಿಂಗ್ ಸ್ಪರ್ಧೆಯಲ್ಲಿದ್ದವು.

ಅತ್ಯುತ್ತಮ ಟೆಲಿವಿಜನ್ ಲಿಮಿಟೆಡ್ ಸೀರೀಸ್, ಆಂಥಾಲಜಿ ಸೀರೀಸ್ ಅಥವಾ ಟೆಲಿವಿಜನ್ ಫಿಲ್ಮ್ ವಿಭಾಗದಲ್ಲಿ ‘ಅಡೋಲೆಸೆನ್ಸ್’ ಪ್ರಶಸ್ತಿ ಗೆದ್ದಿದೆ. ಈ ವಿಭಾಗದಲ್ಲಿ ಪ್ರಶಸ್ತಿಗಾಗಿ ‘ಆಲ್ ಹರ್ ಫಾಲ್ಟ್’, ‘ದಿ ಬೀಸ್ಟ್ ಇನ್ ಮಿ’, ‘ಬ್ಲ್ಯಾಕ್ ಮಿರರ್’, ‘ಡೈಯಿಂಗ್ ಫಾರ್ ಸೆಕ್ಸ್’, ಹಾಗೂ ‘ದಿ ಗರ್ಲ್ಫ್ರೆಂಡ್’ ಸ್ಪರ್ಧೆಯಲ್ಲಿದ್ದವು.

ಡ್ರಾಮಾ ವಿಭಾಗದಲ್ಲಿ ಅತ್ಯುತ್ತಮ ಟೆಲಿವಿಜನ್ ಸರಣಿ ಪ್ರಶಸ್ತಿಯನ್ನು ‘ದಿ ಪಿಟ್’ ಗೆದ್ದುಕೊಂಡಿದೆ. ಈ ವಿಭಾಗದಲ್ಲಿ ಪ್ರಶಸ್ತಿಗಾಗಿ ‘ದಿ ಡಿಪ್ಲೊಮ್ಯಹಾಟ್’, ‘ಪ್ಲ್ಯೂರಿಬಸ್’, ‘ಸೆವೆರನ್ಸ್’, ‘ಸ್ಲೋ ಹಾರ್ಸಸ್’ ಹಾಗೂ ‘ದಿ ವೈಟ್ ಲೋಟಸ್’ ಸ್ಪರ್ಧೆಯಲ್ಲಿದ್ದವು.

ಡ್ರಾಮಾ ವಿಭಾಗದಲ್ಲಿ ಅತ್ಯುತ್ತಮ ಟೆಲಿವಿಜನ್ ಸರಣಿಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‘ಪ್ಲ್ಯೂರಿಬಸ್’ ಸೀರೀಸ್ ಗಾಗಿ ರಿಯಾ ಸೀಹಾರ್ನ್ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ‘ಮ್ಯಾಟ್ಲಾಕ್’ ಸೀರೀಸ್ ನ ಕ್ಯಾಥಿ ಬೇಟ್ಸ್, ಸೆವೆರೆನ್ಸ್ನ ಬ್ರಿಟ್ ಲೋವರ್, ಮಾಬ್ಲ್ಯಾಂಡ್ನ ಹೆಲೆನ್ ಮಿರರ್, ‘ದಿ ಲಾಸ್ಟ್ ಆಫ್ ಅಸ್’ನ ಬೆಲ್ಲಾ ರ್‍ಯಾಮ್ಸೆ ಹಾಗೂ ‘ದಿ ಡಿಪ್ಲೊಮ್ಯಾಟ್’ನ ಕೇರಿ ರಸೆಲ್ ಸ್ಪರ್ಧೆಯಲ್ಲಿದ್ದಾರೆ.

ಟೆಲಿವಿಝನ್ ನಲ್ಲಿ ಅತ್ಯುತ್ತಮ ಸ್ಯಾಂಡಪ್ ಕಾಮಿಡಿ ವಿಭಾಗದಲ್ಲಿ ರಿಕಿ ಗೆರ್ವೈಸ್ ಅವರು ‘ಮೋರ್ಟಾಲಿಟಿ’ ಗಾಗಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ವಿಭಾಗದಲ್ಲಿ ಬಿಲ್ ಮ್ಯಾಹೆರ್ ಅವರು ‘ಈಸ್ ಎನಿವನ್ ಎಲ್ಸ್ ಸೀಯಿಂಗ್ ದಿಸ್?’, ಬ್ರೆಟ್ ಗೋಲ್ಡ್ಸ್ಟೇನ್ ‘ದಿ ಸೆಕೆಂಡ್ ಬೆಸ್ಟ್ ನೈಟ್ ಆಫ್ ಯುವರ್ ಲೈಫ್’, ಕೆವಿನ್ ಹಾರ್ಟ್ ‘ಆಕ್ಟಿಂಗ್ ಮೈ ಏಜ್’, ಕುಮೈಲ್ ನಾನ್ಜಿಯಾನಿ ‘ನೈಟ್ ಥಾಟ್ಸ್’ಗಾಗಿ ಮತ್ತು ಸಾರಾ ಸಿಲ್ವರ್ಮನ್ ‘ಪೋಸ್ಟ್ಮಾರ್ಟಮ್’ಗಾಗಿ ಸ್ಪರ್ಧೆಯಲ್ಲಿದ್ದರು.

ಟೆಲಿವಿಝನ್ ಗಾಗಿ ಅತ್ಯುತ್ತಮ ಪೋಷಕನಟಿ ಪ್ರಶಸ್ತಿಯನ್ನು ‘ಅಡೋಲಸೆನ್ಸ್’ಗಾಗಿ ಎರಿನ್ ಡೊಹೆರ್ತಿ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ‘ದಿ ವೈಟ್ ಲೋಟಸ್’ನ ಕ್ಯಾರಿ ಕೂನ್, ‘ಹ್ಯಾಕ್ಸ್’ನ ಹನ್ನಾ ಐನ್ಬೈಂಡತ್, ‘ದಿ ಸ್ಟುಡಿಯೊ’ದ ಕ್ಯಾಥರೀನ್ ಓಹಾರಾ, ‘ದಿ ವೈಟ್ ಲೋಟಸ್’ನ ಪಾರ್ಕರ್ ಫೋಸಿ, ‘ದಿ ವೈಟ್ ಲೋಟಸ್’ನ ಐಮೀ ಲೌ ವುಡ್ ಸ್ಪರ್ಧೆಯಲ್ಲಿದ್ದರು.

ಇಂಗ್ಲಿಷೇತರ ಭಾಷೆಯ ಅತ್ಯುತ್ತಮ ಸಿನಿಮಾ ಪ್ರಶಸ್ತಿಯ್ನು ‘ದಿ ಸೀಕ್ರೆಟ್ ಏಜೆಂಟ್’ ಗೆದ್ದುಕೊಮಡಿದೆ. ಈ ವಿಭಾಗದಲ್ಲಿ ‘ಇಟ್ ವಾಸ್ ಜಸ್ಟ್ ಆನ್ ಅಕ್ಸಿಡಂಟ್’, ‘ನೋ ಅದರ್ ಚಾಯ್ಸ್’, ‘ಸೆಂಟಿಮೆಂಟಲ್ ವ್ಯಾಲ್ಯು’, ‘ಸಿರಾಟ್’ ಹಾಗೂ ‘ದಿ ವಾಯ್ಸ್ ಆಫ್ ಹಿಂದ್ ರಾಜಾಬ್’ ಸ್ಪರ್ಧೆಯಲ್ಲಿದ್ದವು.

ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪೌಲ್ ಥಾಮಸ್ ಆಂಡರ್ಸನ್ ಅವರು ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾಗೆ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ ಸಿನ್ನರ್ಸ್ ಗಾಗಿ ರಿಯಾನ್ ಕೂಗ್ಲರ್, ಫ್ರಾಂಕೆಸ್ಟೀನ್ ಗೆ ಗಿಲೆರೊಮೊ ಡೆಲ್ ಟೊರೊ, ‘ಇಟ್ ವಾಸ್ ಜಸ್ಟ್ ಆನ್ ಅಕ್ಸಿಡಂಟ್ಗೆ ಜಫಾರ್ ಪನಾಹಿ, ಸೆಂಟಿಮೆಂಟಲ್ ವ್ಯಾಲ್ಯೂಗೆ ಜೋಷಿಮ್ ಟ್ರೈರ್, ಹ್ಯಾಮ್ನೆಟ್ಗೆ ಷೋಲೆ ಝಾಹೋ ಸ್ಪರ್ಧೆಯಲ್ಲಿದ್ದರು.

ಉಳಿದಂತೆ ಅನಿಮೇಶನ್ ನಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ಕೆಪಾಪ್ ಡೆಮನ್ ಹಂಟರ್ಸ್’ ಗೆದ್ದುಕೊಂಡಿದೆ. ಸಿನಿಮಾಟಿಕ್ ಮತ್ತು ಬಾಕ್ಸ್ ಆಫೀಸ್ ಸಾಧನೆಗಾಗಿ ‘ಸಿನ್ನರ್’ ಪ್ರಶಸ್ತಿ ಗೆದ್ದುಕೊಂಡಿದೆ. ಟೆಲಿವಿಜನ್ ಲಿಮಿಟೆಡ್ ಸೀರೀಸ್, ಆಂತೊಲಜಿ ಸೀರೀಸ್ ಅಥವಾ ಟೆಲಿವಿಜನ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‘ಡೈಯಿಂಗ್ ಫಾರ್ ಸೆಕ್ಸ್’ ನಟನೆಗಾಗಿ ಮಿಷೆಲ್ ವಿಲಿಯಮ್ಸ್ ಗೆದ್ದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಅಡೋಲಸೆನ್ಸ್’ಗಾಗಿ ಸ್ಟೀಫನ್ ಗ್ರಹಾಮ್ ಗೆದ್ದಿದ್ದಾರೆ.

ಸಿನಿಮಾ-ಸಂಗೀತ ಅಥವಾ ಹಾಸ್ಯ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಮಾರ್ಟಿ ಸುಪ್ರೀಮ್’ಗಾಗಿ ಟಿಮೋಥೀ ಚಲಮೆಟ್ ಗೆದ್ದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ‘ಇಫ್ ಐ ಹ್ಯಾಡ್ ಲೆಗ್ಸ್ ಐವುಡ್ ಕಿಕ್ ಯು’ ಸಿನಿಮಾಗೆ ರೋಸ್ ಬೈರ್ನ್ ಗೆದ್ದುಕೊಂಡಿದ್ದಾರೆ.

ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಸ್ಕ್ರೀನ್ ಪ್ಲೇಗೆ (ಕಥಾ ನಿರೂಪಣೆ) ‘ಒನ್ ಬ್ಯಾಟಲ್ ಆಫಸ್ಟರ್ ಅನದರ್’ಗೆ ಪೌಲ್ ಥಾಮಸ್ ಆಂಡರ್ಸನ್ ಗೆದ್ದಿದ್ದಾರೆ. ಅತ್ಯುತ್ತಮ ಒರಿಜಿನಲ್ ಸ್ಕೋರ್ (ಸಾಹಿತ್ಯ) ವಿಭಾಗದಲ್ಲಿ ‘ಸಿನ್ನರ್ಸ್’ಗೆ ಲ್ಯುಡ್ವಿಗ್ ಗೋರನ್ಸ್ನನ್ ಪ್ರಶಸ್ತಿ ಗೆದ್ದಿದ್ದಾರೆ. ಅತ್ಯುತ್ತಮ ಒರಿಜಿನಲ್ ಸಾಂಗ್ (ಹಾಡು) ಪ್ರಶಸ್ತಿ ಕೆಪಾಪ್ ಡೆಮನ್ ಹಂಟರ್ಸ್ಗೆ ‘ಗೋಲ್ಡನ್’ ಹಾಡಿಗೆ ದೊರೆತಿದೆ. ಅತ್ಯುತ್ತಮ ಪಾಡ್ಕಾಸ್ಟ್ ಪ್ರಶಸ್ತಿ ‘ಗುಡ್ ಹ್ಯಾಂಗ್ ವಿತ್ ಅಮಿ ಪೋಷ್ಲೆರ್’ಗೆ ದೊರೆತಿದೆ.

ಟೆಲಿವಿಝನ್ ಸೀರೀಸ್ ಸಂಗೀತ ಅಥವಾ ಹಾಸ್ಯ ವಿಭಾಗದ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ದಿ ಸ್ಟುಡಿಯೋಗೆ ಸೇಥ್ ರೋಝನ್ ಗೆದ್ದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ‘ಅಡೋಲಸೆನ್ಸ್’ಗೆ ಓವನ್ ಕೂಪರ್ ಗೆದ್ದಿದ್ದಾರೆ. ಇದೇ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ‘ಹ್ಯಾಕ್ಸ್’ನ ಜೀನ್ ಸ್ಮಾರ್ಟ್ ಆಯ್ಕೆಯಾಗಿದ್ದಾರೆ. ಟೆಲಿವಿಝನ್ ಸೀರೀಸ್ ಡ್ರಾಮಾದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ದಿ ಪಿಟ್’ಗೆ ನೋವಾ ವೈಲ್ ಗೆದ್ದಿದ್ದಾರೆ. ಸಿನಿಮಾ ವಿಭಾಗದಲ್ಲಿ ಪೋಷಕ ನಟ ಪ್ರಶಸ್ತಿಯನ್ನು ‘ಸೆಂಟಿಮೆಂಟಲ್ ವ್ಯಾಲ್ಯು’ಗೆ ಸ್ಟೆಲ್ಲಾನ್ ಸ್ಕಾರ್ಸ್ಗಾರ್ಡ್ ಗೆದ್ದಿದ್ದಾರೆ. ಇದೇ ವಿಭಾಗದಲ್ಲಿ ಪೋಷಕ ನಟಿ ಪ್ರಶಸ್ತಿಯನ್ನು ‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಟೆಯಾನಾ ಟೇಲರ್ ಗೆದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News