ಮೊದಲ ದಿನವೇ ನೂರು ಕೋಟಿ ಗಳಿಕೆ ದಾಖಲಿಸಿದ Toxic; ವರದಿ
ʼಜವಾನ್ʼ, ʼಧುರಂಧರ್ʼ ನ ಮೊದಲ ದಿನದ ಗಳಿಕೆ ಹಿಂದಿಕ್ಕಿದ ಯಶ್ ಸಿನಿಮಾ
Photo Credit : imdb.com
ಯಶ್ ನಟಿಸಿದ ‘ಟಾಕ್ಸಿಕ್’ ಸಿನಿಮಾ ಮೊದಲ ದಿನದಂದೇ 100 ಕೋಟಿ ಕ್ಲಬ್ ಗೆ ಪ್ರವೇಶಿಸಿದೆ. ಆದರೆ ಭಾರತದ ನಿವ್ವಳ ಮತ್ತು ವಿಶ್ವಾದ್ಯಂತ ಗಳಿಕೆಯಲ್ಲಿ ಯಶ್ ಅವರ 2022ರ ಬ್ಲಾಕ್ ಬಸ್ಟರ್ ಕೆಜಿಎಫ್: ಅಧ್ಯಾಯ 2ಗಿಂತ ಹಿಂದುಳಿದಿದೆ.
ಯಶ್ ಅವರ ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ನೂರು ಕೋಟಿ ರೂ.ಗಳ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನದ ಮೆಟ್ರಿಕ್ ಗಳಲ್ಲಿ ಶಾರುಖ್ ಖಾನ್ ಅವರ ಜವಾನ್ (2023) ಮತ್ತು ರಣ್ವೀರ್ ಸಿಂಗ್ ಅವರ ಧುರಂಧರ್ (2025) ಅನ್ನು ಹಿಂದಿಕ್ಕಿ ಮೊದಲ ದಿನದಂದೇ ಸಿನಿಮಾ 100 ಕೋಟಿ ಕ್ಲಬ್ ಗೆ ಪ್ರವೇಶಿಸಿದೆ. ಆದರೆ ಭಾರತದ ನಿವ್ವಳ ಮತ್ತು ವಿಶ್ವಾದ್ಯಂತ ಗಳಿಕೆಯಲ್ಲಿ ಯಶ್ ಅವರ 2022ರ ಬ್ಲಾಕ್ ಬಸ್ಟರ್ ಕೆಜಿಎಫ್: ಅಧ್ಯಾಯ 2ಗಿಂತ ಹಿಂದುಳಿದಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾವು ಆಗಸ್ಟ್ 26ರಂದು ಹೆಚ್ಚಿನ ನಿರೀಕ್ಷೆಗಳ ನಡುವೆ ಬಿಡುಗಡೆಯಾಯಿತು ಮತ್ತು ಮೊದಲ ದಿನದಂದೇ ವಿಶ್ವಾದ್ಯಂತ 140.75 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ.
ಟ್ರೇಡ್ ವೆಬ್ಸೈಟ್ ಸಾಕ್ನಿಲ್ಕ್ ಪ್ರಕಾರ, ‘ಟಾಕ್ಸಿಕ್’ ಭಾರತದಲ್ಲಿ 120.75 ಕೋಟಿ ರೂ. ಮತ್ತು ವಿದೇಶದಲ್ಲಿ 20 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 24,579 ಪ್ರದರ್ಶನಗಳಿಂದ ನಿವ್ವಳ ಗಳಿಕೆಯು 101.10 ಕೋಟಿ ರೂ.ಗಳಷ್ಟಿತ್ತು. ವಿಶ್ವಾದ್ಯಂತ ಗಳಿಕೆಯಲ್ಲಿ ಈ ಸಿನಿಮಾವು ಆದಿಪುರುಷ ಮತ್ತು ಜವಾನ್ ಅನ್ನು ಹಿಂದಿಕ್ಕಿದೆ. ಆದರೆ ದೇವರ, ಸಲಾರ್, ಕೆಜಿಎಫ್ 2, ಕಲ್ಕಿ, ಬಾಹುಬಲಿ 2, RRR, ಧುರಂಧರ್ 2 ಮತ್ತು ಪುಷ್ಪ 2ಗಿಂತ ಕೆಳಮಟ್ಟದಲ್ಲಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ‘ಟಾಕ್ಸಿಕ್’ ಸುಮಾರು 30.50 ಕೋಟಿ ರೂ. ಗಳಿಕೆ ದಾಖಲಿಸಿದ್ದು, ಸಿನಿಮಾಗೆ ದಕ್ಷಿಣ ಭಾರತ ಪ್ರಬಲ ಮಾರುಕಟ್ಟೆಯಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಜೊತೆಗೂಡಿ 18.50 ಕೋಟಿ ರೂ. ಗಳಿಕೆ ದಾಖಲಿಸಿದೆ. ಉಳಿದಂತೆ ತಮಿಳುನಾಡಿನಲ್ಲಿ 6.75 ಕೋಟಿ ರೂ. ಮತ್ತು ಕೇರಳಂನಲ್ಲಿ 2.25 ಕೋಟಿ ರೂ. ಓಪನಿಂಗ್ ದಿನದ ಗಳಿಕೆ ದಾಖಲಿಸಿದೆ.
ಟಾಕ್ಸಿಕ್ ದಿನ 1 ಗಳಿಕೆ
ಭಾರತದಲ್ಲಿ ನಿವ್ವಳ 101.10 ಕೋಟಿ ರೂ.
ಭಾರತದಲ್ಲಿ ಒಟ್ಟು 120.75 ಕೋಟಿ ರೂ.
ವಿದೇಶದಲ್ಲಿ ಒಟ್ಟು 20 ಕೋಟಿ ರೂ.
ವಿಶ್ವಾದ್ಯಂತ ಒಟ್ಟು 140.75 ಕೋಟಿ ರೂ.
ಭಾರತದ ಉಳಿದ ಭಾಗಗಳಿಂದ ಅತ್ಯುತ್ತಮ ಗಳಿಕೆ ದಾಖಲಾಗಿದ್ದು, 62.75 ಕೋಟಿ ರೂ. ಗಳಿಸಿದೆ. ಅಂದರೆ, ಚಿತ್ರದ ಮೊದಲ ದಿನದ ಒಟ್ಟು ಗಳಿಕೆಯ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದೆ. ಅಂಕಿ-ಅಂಶಗಳು ತೋರಿಸಿರುವಂತೆ ‘ಟಾಕ್ಸಿಕ್’ ಕರ್ನಾಟಕ ಮತ್ತು ಇತರ ದಕ್ಷಿಣ ಮಾರುಕಟ್ಟೆಗಳಲ್ಲಿ ದೃಢವಾದ ನೆಲೆ ಹೊಂದಿದ್ದರೂ, ಅದರ ಆರಂಭಿಕ ಗಳಿಕೆಯ ಹೆಚ್ಚಿನ ಭಾಗವು ದೇಶಾದ್ಯಂತ ಉಳಿದ ಭಾಗಗಳ ಪ್ರೇಕ್ಷಕರಿಂದ ಬಂದಿದೆ.
ಭಾರತದ ನಿವ್ವಳ ಆರಂಭಿಕ ದಿನದ ಗಳಿಕೆಯ ವಿಷಯದಲ್ಲಿ ಟಾಕ್ಸಿಕ್ 101.10 ಕೋಟಿ ರೂ. ಗಳಿಸಿದ್ದು, ಕಲ್ಕಿ (95 ಕೋಟಿ ರೂ.), ಸಲಾರ್ (91 ಕೋಟಿ ರೂ.), ಆದಿಪುರುಷ್ (87 ಕೋಟಿ ರೂ.), ದೇವರ (83 ಕೋಟಿ ರೂ.), ಮತ್ತು ಜವಾನ್ (75 ಕೋಟಿ ರೂ.) ಕಲೆಕ್ಷನ್ ಅನ್ನು ಮೀರಿಸಿದೆ. ಆದರೆ ಧುರಂಧರ್ 2 (. 103 ಕೋಟಿ ರೂ.), ಕೆಜಿಎಫ್ 2 (116 ಕೋಟಿ ರೂ.), ಬಾಹುಬಲಿ 2 (116 ಕೋಟಿ ರೂ.), ಆರ್ಆರ್ಆರ್ (133 ಕೋಟಿ ರೂ.) ಮತ್ತು ಪುಷ್ಟ 2 (164.25 ಕೋಟಿ ರೂ.) ಗಳಿಕೆಯ ನಂತರದ ಸ್ಥಾನದ್ಲಲಿದೆ.
ಸಿನಿಮಾ ಮೊದಲ ದಿನದ ಭಾರತದ ನಿವ್ವಳ ಗಳಿಕೆ
ಪುಷ್ಪಾ 2 164.25 ಕೋಟಿ ರೂ.
ಆರ್ಆರ್ಆರ್ 133 ಕೋಟಿ ರೂ.
ಬಾಹುಬಲಿ 2 121 ಕೋಟಿ ರೂ.
ಕೆಜಿಎಫ್ 2 116 ಕೋಟಿ ರೂ.
ಧುರಂಧರ್ 2 103 ಕೋಟಿ ರೂ.
ಟಾಕ್ಸಿಕ್ 101.10 ಕೋಟಿ ರೂ.
ಕಲ್ಕಿ 95 ಕೋಟಿ ರೂ.
ಸಲಾರ್ 91 ಕೋಟಿ ರೂ.
ಆದಿಪುರುಷ್ 87 ಕೋಟಿ ರೂ.
ದೇವರ 83 ಕೋಟಿ ರೂ.
ಜವಾನ್ 75 ಕೋಟಿ ರೂ.
ವಿಶ್ವಾದ್ಯಂತ ಮೊದಲ ದಿನದ ಒಟ್ಟು ಗಳಿಕೆಯಲ್ಲಿ ‘ಟಾಕ್ಸಿಕ್’ನ 140.75 ಕೋಟಿ ರೂ. ದಾಖಲಿಸಿದ್ದು, ‘ಆದಿಪುರುಷ’ ಮತ್ತು ‘ಜವಾನ್’ ಸಿನಿಮಾಗಳ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಿದೆ. ಆದರೆ ‘ದೇವರ’, ‘ಸಲಾರ್’, ‘ಕೆಜಿಎಫ್2’, ‘ಕಲ್ಕಿ’, ‘ಬಾಹುಬಲಿ’, ‘ಆರ್ಆರ್ಆರ್’, ‘ಧುರಂಧರ್ 2’, ‘ಪುಷ್ಪ 2’ ಚಿತ್ರಗಳಿಗಿಂತ ಕಡಿಮೆಯಾಗಿದೆ.
ಸಿನಿಮಾ ಮೊದಲದಿನದ ಜಾಗತಿಕ ಗಳಿಕೆ
ಪುಷ್ಟಾ 2 275.01 ಕೋಟಿ ರೂ.
ಧುರಂಧರ್ 2 226.60 ಕೋಟಿ ರೂ.
ಆರ್ಆರ್ಆರ್ 223 ಕೋಟಿ ರೂ.
ಬಾಹುಬಲಿ 2 217 ಕೋಟಿ ರೂ.
ಕಲ್ಕಿ 177.72 ಕೋಟಿ ರೂ.
ಸಲಾರ್ 158.12 ಕೋಟಿ ರೂ.
ಕೆಜಿಎಫ್ 2 159 ಕೋಟಿ ರೂ.
ದೇವರ 142.02 ಕೋಟಿ ರೂ.
ಟಾಕ್ಸಿಕ್ 140.75 ಕೋಟಿ ರೂ.
ಜವಾನ್ 129.13 ಕೋಟಿ ರೂ.
ಆದಿಪುರುಷ್ 128.08 ಕೋಟಿ ರೂ.
ಬುಧವಾರ ಮಧ್ಯಾಹ್ನದ ಮೊದಲು ಪೂರ್ಣದಿನದ ಅಂಕಿ-ಅಂಶಗಳು ಬರುವ ಮೊದಲೇ ‘ಟಾಕ್ಸಿಕ್’ ಅದಾಗಲೇ ‘ಧುರಂಧರ್’ನ ಆರಂಭಿಕ ದಿನದ ಭಾರತದ ನಿವ್ವಳವನ್ನು ಮೀರಿತ್ತು. ಮಧ್ಯಾಹ್ನ 12.40 ಹೊತ್ತಿಗೆ ಸಿನಿಮಾವು 9,003 ಟ್ರ್ಯಾಕ್ ಮಾಡಿದ ಪ್ರದರ್ಶನಗಳಲ್ಲಿ 31.76 ಕೋಟಿ ರೂ. ನಿವ್ವಳವನ್ನು ಸಂಗ್ರಹಿಸಿದೆ ಮತ್ತು ಭಾರತದ ಒಟ್ಟು 37.48 ಕೋಟಿ ರೂ. ಗಳಿಕೆಯನ್ನು ದಾಖಲಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
ಮೊದಲಿಗೆ ಬೆಳಗಿನ 10 ಗಂಟೆಯ 5,334 ಪ್ರದರ್ಶನಗಳಲ್ಲಿ ಭಾರತದ ನಿವ್ವಳ 19.18 ಕೋಟಿ ರೂ. ಗಳಿಕೆ ಮಾಡಿ ಭಾರತದ ಒಟ್ಟು 22.63 ಕೋಟಿ ರೂ. ಗಳಿಕೆಯನ್ನು ದಾಖಲಿಸಿದೆ.
ಸಿನಿಮಾಗೆ ಮುಂಗಡ ಬುಕಿಂಗ್ ಬಲವಾಗಿತ್ತು. ಸಿನಿಮಾವು ಮೊದಲ ದಿನಕ್ಕೆ 1 ದಶಲಕ್ಷ ಟಿಕೆಟ್ಗಳನ್ನು ಮಾರಾಟ ಮಾಡಿತ್ತು. ಬ್ಲಾಕ್ ಸೀಟ್ಗಳಿಲ್ಲದೆ ಭಾರತದ ಮುಂಗಡ ಮಾರಾಟವು 58.27 ಕೋಟಿ ರೂ. ದಾಟಿತ್ತು. 25,654 ಪ್ರದರ್ಶನಗಳಲ್ಲಿ 18.48 ಲಕ್ಷಕ್ಕೂ ಮೀರಿ ಟಿಕೆಟ್ಗಳು ಮಾರಾಟವಾಗಿದ್ದವು. ಬ್ಲಾಕ್ ಸೀಟು ಒಳಗೊಂಡಂತೆ ಮುಂಗಡ ಬುಕಿಂಗ್ 73.43 ಕೋಟಿ ರೂ.ಗಳಷ್ಟಿದ್ದರೆ, ವಿಶ್ವಾದ್ಯಂತ ಮುಂಗಡ ಮಾರಾಟ 85 ಕೋಟಿ ರೂ.ಗಳಷ್ಟಿತ್ತು. ಸಿನಿಮಾಗೆ ವಿಶೇಷವಾಗಿ ಅಮೆರಿಕದ ಮಾರುಕಟ್ಟೆಗಳಲ್ಲಿ ಉತ್ತಮ ಆಸಕ್ತಿ ದಾಖಲಾಗಿದೆ.
ಆದರೆ ಸಿನಿಮಾಗೆ ಉತ್ತಮ ರೇಟಿಂಗ್ ದೊರೆತಿಲ್ಲ. ವಿಮರ್ಶೆಗಳಲ್ಲಿ ಟಾಕ್ಸಿಕ್ನ ಕಥಾವಸ್ತು ಸಾರಾಂಶದ ಮೂಲಕ ತಿಳಿಸಲು ಜಟಿಲವಾಗಿದೆ. ಕಥೆ ಮತ್ತು ಅದರ ಪಾತ್ರಗಳ ಆಳವು ಚಿತ್ರದ ವೇಗದ ಎಡಿಟಿಂಗ್ ಅಡಿಯಲ್ಲಿ ಹೂತುಹೋಗುತ್ತದೆ ಎಂದು ವರದಿಯಾಗಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ನಲ್ಲಿ ನಟ ಯಶ್ ಪ್ರಮುಖ ಪಾತ್ರದಲ್ಲಿದ್ದು, ನಯನತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯ ನಟಿಸಿದ್ದಾರೆ. ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಬಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿಬಿಎಫ್ಸಿ ಸಿನಿಮಾಗೆ ಯಾವುದೇ ಕಡಿತವಿಲ್ಲದೆ ‘ಎ’ ಪ್ರಮಾಣಪತ್ರ ನೀಡಿದೆ.
ಮಾಹಿತಿ ಕೃಪೆ: ಇಂಡಿಯಾ ಟುಡೆ