×
Ad

ಸ್ಪೀಕರ್ ಖಾದರ್‌ರಿಂದ ಗ್ರಾಮದ ಅಭಿವೃದ್ಧಿಗೆ ಅಧಿಕ ಅನುದಾನ: ಮುಸ್ತಫಾ ಹರೇಕಳ

Update: 2025-10-19 19:04 IST

ಮಂಗಳೂರು, ಅ.19: ಸ್ಪೀಕರ್ ಯು.ಟಿ.ಖಾದರ್ ಕಳೆದ ಎರಡೂವರೆ ವರ್ಷಗಳಲ್ಲಿ ಇತರ ಗ್ರಾಮಗಳಿಗಿಂತಲೂ ಹರೇಕಳ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ತಿಳಿಸಿದರು.

ಸ್ಪೀಕರ್ ಖಾದರ್‌ರ ಅನುದಾನದಲ್ಲಿ ಹರೇಕಳ ಗ್ರಾಮದ ಆಲಡ್ಕ ಅನ್ಸಾರುಲ್ ಮಸಾಕೀನ್ ದಫ್ ಕಮಿಟಿ ಕಚೇರಿ ಬಳಿ ತಡೆಗೋಡೆ ಹಾಗೂ ನೂತನ ರಸ್ತೆ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಪಂ ಉಪಾಧ್ಯಕ್ಷ ಮಜೀದ್ ಎಂ.ಪಿ., ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಮಾತನಾಡಿದರು. ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಉಮರಬ್ಬ ಶಿಲಾನ್ಯಾಸಗೈದರು. ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಬಶೀರ್ ಉಂಬುದ, ಗ್ರಾಪಂ ಸದಸ್ಯರಾದ ಸತ್ತಾರ್ ಬಾವಲಿಗುರಿ, ಅಬೂಬಕ್ಕರ್ ಸಿದ್ದೀಕ್, ಮುಹಮ್ಮದ್ ರಫೀಕ್, ಪ್ರಮುಖರಾದ ಅಣ್ಣಿ ಪೂಜಾರಿ, ರಫೀಕ್, ಲತೀಫ್ ಆಲಡ್ಕ, ಅಹ್ಮದ್, ಸತ್ತಾರ್, ಜಲೀಲ್, ಲತೀಫ್, ಖಾದರ್, ರಝಾಕ್, ಸಫ್ವಾನ್, ಇಬ್ರಾಹಿಂ, ಬದ್ರುದ್ದೀನ್, ಮುನೀರ್, ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News