×
Ad

ಬಜ್ಪೆ: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2023-11-22 23:04 IST

ಬಜ್ಪೆ: ಫಲ್ಗುಣಿ ನದಿಗೆ ಬಿದ್ದು ನೀರು ಪಾಲಾಗಿದ್ದ ಕಾವೂರು ಆಕಾಶಭವನ ನಿವಾಸಿ ಪ್ರಭಾಕರ ಆಚಾರಿ ಎಂಬವರ ಪುತ್ರ ಪ್ರಶಾಂತ್ ಕುಮಾರ್ ಅವರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.

ಮಂಗಳವಾರ ಬೆಳಗ್ಗೆ ತನ್ನ ಗೆಳೆಯರೊಂದಿಗೆ ಪೊಳಲಿ ದೇವಸ್ಥಾನಕ್ಕೆ ತೆರಳಿದ್ದ ಪ್ರಶಾಂತ್‌ ಆಚಾರಿ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನದಿಗೆ ಇಳಿದು ಸ್ನಾನ ಮಾಡಿದ್ದರು. ಬಳಿಕ ಅವರ ಶೂವೊಂದರ ದಾರ ನೀರಿನಲ್ಲಿ ಹೋಗಿದೆ ಎಂದು ಅದನ್ನು ಹುಡುಕಿ ನೀರಿಗೆ ಇಳಿದಿದ್ದ ವೇಳೆ ಅವರು ನದಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು ಎಂದು ಅವರ ಸ್ನೇಹಿತರು ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ.

ನಾಪತ್ತೆಯಾದ ಕುರಿತು ಮಾಹಿತಿ ತಿಳಿದೊಡನೆ ಬಜ್ಪೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಶಾಂತ್‌ ಆಚಾರಿ ಅವರಿಗಾಗಿ ಶೋಧಕಾರ್ಯ ಆರಂಭಿಸಿದ್ದರು.

ಬುಧವಾರ ಸಂಜೆ 3 ಗಂಟೆಯ ಸುಮಾರಿಗೆ ಪ್ರಶಾಂತ್‌ ಆಚಾರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News