×
Ad

ಬಿ.ಸಿ.ರೋಡ್| ಮಾರುವೇಷದಲ್ಲಿ ಬಂದು ಪತಿಗೆ ಚೂರಿ ಇರಿತ: ಪತ್ನಿ ಪೊಲೀಸ್‌ ವಶಕ್ಕೆ

Update: 2025-11-19 21:40 IST

ಬಂಟ್ವಾಳ: ಮಾರುವೇಷದಲ್ಲಿ ಬಂದ ಮಹಿಳೆಯೋರ್ವರು ತನ್ನ ಪತಿಗೆ ಚೂರಿಯಿಂದ ಇರಿದ ಘಟನೆ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಗಾಯಗೊಂಡಿದ್ದು, ಚೂರಿ ಇರಿದ ಅವರ ಪತ್ನಿ ಜ್ಯೋತಿ ಸೋಮಯಾಜಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬುಧವಾರ ರಾತ್ರಿ ವೇಳೆ ಏಕಾಏಕಿ ಪತಿಯ ಸೋಮಯಾಜಿ ಟೆಕ್ಸ್ಟ್ ಟೈಲ್ಸ್ ಮಳಿಗೆಗೆ ಬುರ್ಖಾ ಧರಿಸಿ ಬಂದ ಪತ್ನಿ ಜ್ಯೋತಿ ಸೋಮಯಾಜಿ ಅವರು ಅಂಗಡಿಯ ಕ್ಯಾಶ್ ಕೌಂಟರಿನಲ್ಲಿದ್ದ ಪತಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ತಕ್ಷಣ ಆರೋಪಿ ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದ್ದು ಹೆಚ್ಚಿನ ವಿವರ ತಿಳಿದುಬಂದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News