ಬೆಳ್ತಂಗಡಿ | ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಸಂದೇಶ: ಪ್ರಕರಣ ದಾಖಲು
Update: 2025-08-03 15:24 IST
ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ, ಕೋಮು ವೈಷಮ್ಯ ಸೃಷ್ಟಿಸುವ ಸಂದೇಶ ಹಾಕಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ನಿವಾಸಿ ಪುತ್ತುಮೋನು ಎಂಬವರು ಈ ಬಗ್ಗೆ ದೂರು ನೀಡಿದ್ದು ಫೇಸ್ ಬುಕ್ ನ ಕುಲುಮೆ ಎಂಬ ಗ್ರೂಪ್ ನಲ್ಲಿ ಅಯ್ಶುಅಯ್ಶಾ (AyshuAysha) ಎಂಬ ಖಾತೆಯಿಂದ ವಿಭಿನ್ನ ಕೋಮುಗಳ ನಡುವೆ ವೈಷಮ್ಯ ಉಂಟು ಮಾಡುವ ಸುಳ್ಳು ವದಂತಿಗಳಿರುವ ಹಾಕಲಾಗಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.