×
Ad

ಯಮಾನಿ ಪದವಿಯಲ್ಲಿ ಬಿಶ್ರ್ ಕರಾಯ ಅವರಿಗೆ 11ನೇ ರ‍್ಯಾಂಕ್‌

Update: 2025-03-11 18:21 IST

ಮುಹಮ್ಮದ್ ಬಿಶ್ರ್ ಕರಾಯ 

ಮಂಗಳೂರು : ಕೇರಳದ ಕೋಝಿಕ್ಕೋಡ್‌ನ ಕುಟ್ಟಿಕಾಟೂರಿನಲ್ಲಿರುವ ಶಂಶುಲ್ ಉಲಮಾ ಈ.ಕೆ ಅಬೂಬಕ್ಕರ್ ಮುಸ್ಲಿಯಾರ್ ಸ್ಮಾರಕ ಇಸ್ಲಾಮಿಕ್ ಸೆಂಟರ್ ಜಾಮಿಅಃ ಯಮಾನಿಯ್ಯ ನಡೆಸಿದ ಯಮಾನಿ ಪದವಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಕರಾಯದ ಮುಹಮ್ಮದ್ ಬಿಶ್ರ್ ಕರಾಯ ಅವರು 11ನೇ ರ‍್ಯಾಂಕ್‌ ನೊಂದಿಗೆ ತೇರ್ಗಡೆಯಾಗಿದ್ದಾರೆ.

SKSSF ಕರಾಯ ಕ್ಲಸ್ಟರ್ / ಯುನಿಟ್ ನ ಕಾರ್ಯಕಾರಿ ಕಾರ್ಯದರ್ಶಿಯಾಗಿರುವ ಬಿಶ್ರ್ ಅವರು ಕರಾಯ ಬದ್ರಿಯಾ ಜುಮಾ ಮಸೀದಿಯಲ್ಲಿ ಉಸ್ತಾದರಾಗಿರುವ ಕೆ ಎಚ್ ಹಮೀದ್ ಮುಸ್ಲಿಯಾರ್ ಹಾಗೂ ಹಾಝ್ರಾ ದಂಪತಿಯ ಪುತ್ರ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News