×
Ad

' ಮೀಫ್ ಎಕ್ಸೆಲೆನ್ಸ್ ಅವಾರ್ಡ್ 2025': ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಅತ್ಯುತ್ತಮ ಕಾಲೇಜು ಪುರಸ್ಕಾರ

Update: 2025-05-23 11:45 IST

ಮಂಗಳೂರು:  ದ.ಕ. ಉಡುಪಿ, ಕೊಡಗು, ಮತ್ತು ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ವತಿಯಿಂದ ನಡೆದ 'ಮೀಫ್ ಎಕ್ಸೆಲೆನ್ಸ್ ಅವಾರ್ಡ್ 2024-25' ರಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು 100% ಫಲಿತಾಂಶ ದಾಖಲಿಸಿದ ವಿದ್ಯಾ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೇ22 ರಂದು ನಗರದ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಅಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ.ಮೋಹನ್‌ ಆಳ್ವ, ಮೀಫ್  ನ ಗೌರವಾಧ್ಯಕ್ಷರಾದ ಉಮ್ಮರ್ ಟೀಕೆ, ಮುಖ್ಯ ಅತಿಥಿಯಾಗಿ ಬರಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಬಜ್ಜೆ, ಪ್ರೆಸಿಡೆನ್ಸಿ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರಾದ ಸುಹೈಲ್ ಅಹಮದ್‌, ಎಚ್ ಪಿ ಆರ್ ವಿದ್ಯಾಸಂಸ್ಥೆ ಮಣಿಪಾಲ್ ಇದರ ಅಧ್ಯಕ್ಷರಾದ ಹರಿಪ್ರಸಾದ್ ರೈ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಮೀಫ್ ಸದಸ್ಯತ್ವ ಪಡೆದ ಪದವಿಪೂರ್ವ ಕಾಲೇಜುಗಳ ಪೈಕಿ ಪಿ.ಯು.ಸಿ. ಬೋರ್ಡ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಡಿಸ್ಟಿಂಕ್ಷನ್ ಮತ್ತು ಪ್ರಥಮ ಶ್ರೇಣಿ ಹಾಗೂ ಪಕ್ಷೇತರ ಚಟುವಟಿಕೆಗಳಲ್ಲಿ ಸಾಧನೆಗೈದು ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಪೂರ್ವ ಕಾಲೇಜು ದ್ವಿತೀಯ ಬಾರಿಗೆ ದ್ವಿತೀಯ 'ಅತ್ಯುತ್ತಮ ಕಾಲೇಜು ಪುರಸ್ಕಾರ' ವನ್ನು ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News