×
Ad

ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಿ: ʼಬ್ಯಾರಿ ಎಲ್ತ್‌ಗಾರ್ರೊಟ್ಟುಗು ಪಲಕಬಾಕ್ʼ ಕಾರ್ಯಕ್ರಮದಲ್ಲಿ ಆಗ್ರಹ

Update: 2025-02-13 19:59 IST

ಮಂಗಳೂರು: ಬ್ಯಾರಿ ಜನಾಂಗದಲ್ಲಿ ಅನೇಕ ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿದ್ದಾರೆ. ಅದರಲ್ಲೂ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಗಮನಾರ್ಹ ಸಾಧನೆಗೈಯುತ್ತಿದ್ದಾರೆ. ಬ್ಯಾರಿ ಅಕಾಡಮಿಯು ಈ ಯುವ ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಗುರುವಾರ ನಗರದ ಶಿವರಾಮ ಕಾರಂತ ಸಭಾಭವನದಲ್ಲಿ ಆಯೋಜಿಸಿದ್ದ ಬ್ಯಾರಿ ಎಲ್ತ್‌ಗಾರ್ರೊಟ್ಟುಗು ಪಲಕಬಾಕ್ ಕಾರ್ಯಕ್ರಮದಲ್ಲಿ ಕೇಳಿ ಬಂದ ಆಗ್ರಹವಿದು.

ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರೆಯುತ್ತಿದ್ದಾರೆ. ಬ್ಯಾರಿ ನಾಟಕ, ಸಂಗೀತ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಅಂತಹವರಿಗೆ ಅಕಾಡಮಿಯು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅವರ ಪ್ರತಿಭೆಗಳನ್ನು ಗುರುತಿಸಿ ಮನ್ನಣೆ ನೀಡಬೇಕು ಎಂಬ ಬೇಡಿಕೆ ಕೇಳಿ ಬಂತು.

ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಬ್ಯಾರಿ ಅಕಾಡಮಿಯು ತನ್ನದೇ ಆದ ಇತಿಮಿತಿಯೊಳಗೆ ಅಕಾಡಮಿಕ್ ಆಗಿ ಕೆಲಸ ಮಾಡುತ್ತದೆ. ಹಾಗಾಗಿ ʼಪಲಕಬಾಕ್ ಕಾರ್ಯಕ್ರಮವನ್ನು ಬೇರೆ ಬೇರೆ ಕಡೆ ಆಯೋಜಿಸುವ ಉದ್ದೇಶವಿದೆ. ಅದಕ್ಕಾಗಿ ಎಲ್ಲರ ಸಹಕಾರ ಬೇಕು. ಬ್ಯಾರಿ ಸಂಶೋಧನೆ, ದಾಖಲೀಕರಣ, ಬ್ಯಾರಿ ಭವನ ನಿರ್ಮಾಣ, ಬ್ಯಾರಿ ಪಠ್ಯಪುಸ್ತಕ ರಚನೆ, ಪ್ರತಿಭಾ ಕಾರಂಜಿ ಮತ್ತು ಆಕಾಶವಾಣಿಯಲ್ಲಿ ಬ್ಯಾರಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲು ಪ್ರಯತ್ನ ಮುಂದುವರಿದಿದೆ ಎಂದರು.

ಸದಸ್ಯರಾದ ಹಮೀದ್ ಹಸನ್ ಮಾಡೂರು, ತಾಜುದ್ದೀನ್ ಅಮ್ಮುಂಜೆ, ಸಾರಾ ಅಲಿ ಪರ್ಲಡ್ಕ, ಹಫ್ಸಾ ಬಾನು ಬೆಂಗಳೂರು, ಶಮೀರಾ ಜಹಾನ್, ಸಾಹಿತಿಗಳಾದ ಕೆಪಿಎ ಅಬ್ದುಲ್ ಖಾದರ್ ಕುತ್ತೆತ್ತೂರು, ಕೆಪಿಎ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಹುಸೈನ್ ಕಾಟಿಪಳ್ಳ, ಖಾಲಿದ್ ತಣ್ಣೀರುಬಾವಿ, ಖಾಲಿದ್ ಯು.ಕೆ., ಶರೀಫ್ ನಿರ್ಮುಂಜೆ, ಇಕ್ಬಾಲ್ ಸೂಫಿ ಅಡ್ಡೂರು, ಇಸ್ಮಾಯಿಲ್ ಮೂಡುಶೆಡ್ಡೆ, ಬಾವಾ ಪದರಂಗಿ, ಅಬ್ದುಲ್ ಖಾದರ್ ಕುಕ್ಕಾಜೆ, ಡಾ. ಅಬೂಬಕರ್ ಸಿದ್ದೀಕ್, ಉಪನ್ಯಾಸಕ ರಝಾಕ್ ಅನಂತಾಡಿ, ಅಬ್ದುಲ್ ಮಜೀದ್ ಮಾಸ್ಟರ್, ಲೇಖಕಿಯರಾದ ಶಮೀಮಾ ಕುತ್ತಾರ್, ಆಯಿಶಾ ಯು.ಕೆ., ರಮೀಝಾ ಎಂಬಿ ಕುಕ್ಕಾಜೆ, ಸೆಮೀರಾ ಕಡಬ, ಮರಿಯಂ ಇಸ್ಮಾಯಿಲ್, ಝುಲೇಖಾ ಮುಮ್ತಾಝ್, ಅಸ್ಮತ್ ವಗ್ಗ, ಸೌದಾ ಮಂಗಳೂರು, ನುಶ್ರತ್, ರಹ್ಮತ್ ಮನ್ಸೂರ್, ಫರ್ಹಾನಾ, ನಝ್ಮತುನ್ನಿಸಾ ಲೈಝ್, ಅಸ್ಮಾ ಬಜ್ಪೆ, ಮೇಲ್ತೆನೆಯ ಅಧ್ಯಕ್ಷ ವಿ.ಇಬ್ರಾಹಿಂ ನಡುಪದವು, ಶಾಹುಲ್ ಹಮೀದ್ ತಂಙಳ್, ಪತ್ರಕರ್ತರಾದ ಹನೀಫ್ ಅನಿಲಕಟ್ಟೆ, ಸಂಶುದ್ದೀನ್ ಎಣ್ಮೂರು, ಜಬ್ಬಾರ್ ಮಲ್ಲೂರು, ಶೌಕತ್ ಅಲಿ ಮಂಗಳೂರು, ಸಲೀಂ ಬೋಳಂಗಡಿ, ಬಶೀರ್ ಕಲ್ಕಟ್ಟ, ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂಎಚ್ ಮೊಯ್ದಿನ್ ಹಾಜಿ ಅಡ್ಡೂರು, ಎಂಜಿ ಶಾಹುಲ್ ಹಮೀದ್ ಗುರುಪುರ, ಬ್ಯಾರಿ ಝುಲ್ಫಿ, ಅಬ್ದುಲ್ ಅಝೀಝ್ ಕಂದಾವರ, ತಾಜ್ ಗಡಿನಾಡು, ಇರ್ಶಾದ್ ಡಿಎಸ್‌ಐಬಿ, ಸೈಫ್ ಕುತ್ತಾರ್, ಬಶೀರ್ ಬಂಟ್ವಾಳ್, ಬಶೀರ್ ಬೆಳ್ಳಾಯಾರು ಮತ್ತಿತರರು ಪಾಲ್ಗೊಂಡಿದ್ದರು.

ಲೇಖಕ ಅಬ್ದುಲ್ ಅಝೀಝ್ ಪುಣಚ ಕಿರಾಅತ್ ಪಠಿಸಿದರು. ರಿಜಿಸ್ಟ್ರಾರ್ ರಾಜೇಶ್ ಸ್ವಾಗತಿಸಿದರು. ಸದಸ್ಯ ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News