ಕರಾಟೆ: ಕುಮೆಟೆಯಲ್ಲಿ ಇಲಾಫ್ ಅಬ್ದುಲ್ ಖಾದಿರ್‌ಗೆ ಚಿನ್ನದ ಪದಕ, ಕಟಾದಲ್ಲಿ ಗಿನ್ನೆಸ್ ವಿಶ್ವ ದಾಖಲೆ
Update: 2025-02-15 20:55 IST
ಮಂಗಳೂರು, ಫೆ.15: ಪ್ರೆಸಿಡೆನ್ಸಿ ಸ್ಕೂಲ್‌ನ 3 ನೇ ತರಗತಿ ವಿದ್ಯಾರ್ಥಿಯಾಗಿರುವ 9ರ ಹರೆಯದ ಕರಾಟೆ ಪ್ರತಿಭೆ ಇಲಾಫ್ ಅಬ್ದುಲ್ ಖಾದಿರ್ ಚೆನ್ನೈನಲ್ಲಿ ನಡೆದ ಪ್ರತಿಷ್ಠಿತ ಕರಾಟೆ ಚಾಂಪಿಯನ್‌ಶಿಪ್‌ನ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.
ದಕ್ಷಿಣ ಕನ್ನಡದಿಂದ ಭಾಗವಹಿಸಿದ ಅತ್ಯಂತ ಕಿರಿಯ ಆಗಿರುವ ಇಲಾಫ್ ಅಬ್ದುಲ್ ಖಾದಿರ್ ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂದು ಸಾಬೀತುಪಡಿಸಿದ್ದಾನೆ.
ಕರಾಟೆಯ ಕಟಾದಲ್ಲಿ 30 ನಿಮಿಷಗಳ ನಾನ್‌ಸ್ಟಾಪ್ ಪ್ರದರ್ಶನದೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದ ಇಲಾಫ್ ಕುಮಿಟೆ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಪಡೆದಿದ್ದಾನೆ.
ಈತನ ಸಾಧನೆಗೆ ಹೆತ್ತವರಾದ ಮುಹಮ್ಮದ್ ಮುಸ್ತಫಾ ಮತ್ತು ಆಸಿಯಾ ಜುವೇರಿಯಾ ಪ್ರೋತ್ಸಾಹ ನೀಡಿದ್ದರು. ಕರಾಟೆ ಅಸೋಸಿಯೇಷನ್‌ನ ಮೂಡಬಿದ್ರಿಯ ಶಿಕ್ಷಕರಾದ ಶೋರಿನ್ ರಿಯ್ಯು, ನದೀಮ್ ಮತ್ತು ಜಕಿಯಾ ಯಾಸ್ಮೀನ್ ಈತನ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.