×
Ad

ಪವಿತ್ರ ಹಜ್ಜ್ ಯಾತ್ರೆಗೈಯಲಿರುವ ಸಹಕಾರಿ ಸಂಘದ ನಿರ್ದೇಶಕರುಗಳಿಗೆ ಬೀಳ್ಕೊಡುಗೆ

Update: 2025-04-22 22:44 IST

ಮಂಗಳೂರು: ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ವತಿಯಿಂದ 2025ನೇ ಸಾಲಿನ ಪವಿತ್ರ ಹಜ್ಜ್ ಯಾತ್ರೆಗೈಯಲಿರುವ ಸಹಕಾರಿ ಸಂಘದ ನಿರ್ದೇಶಕರು ಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಂಗಳೂರಿನ ಬಂದರಿನ ಬಹರ್-ಎ-ನೂರು ಸಭಾಂಗಣದಲ್ಲಿ ನಡೆಯಿತು.

2025ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ನಿರ್ದೇಶಕ ಟಿ.ಎಚ್ ಹಮೀದ್, ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಅಬ್ದುಲ್ ಲತೀಫ್.ಡಿ, ಸದಸ್ಯ ಹನೀಫ್ ತೋಟಬೆಂಗ್ರೆ, ಫಯಾಝ್ ಉಳ್ಳಾಲ್, ಮುಹಮ್ಮದ್ ಮುಸ್ಲಿಯಾರ್ ಇರಾ ಇವರನ್ನು ಸನ್ಮಾನಿಸಲಾಯಿತು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಜೆ. ಮುಹಮ್ಮದ್ ಇಸಾಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬಹರ್-ಎ- ನೂರು ಕಟ್ಟಡದ ಪೈಟಿಂಗ್ ಗುತ್ತಿಗೆದಾರ ಗಿರೀಶ್ ಕುಮಾರ್ ಕದ್ರಿ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತ ಉಪಾಧ್ಯಕ್ಷ ಬಿ.ಆಹ್ಮದ್ ಬಾವಾ, ನಿರ್ದೇಶಕರಾದ ಯು.ಟಿ ಆಹ್ಮದ್ ಶರೀಫ್, ಬಿ.ಇಬ್ರಾಹೀಂ ಖಲೀಲ್, ಎ.ಎಮ್.ಕೆ ಮುಹಮ್ಮದ್ ಇಬ್ರಾಹೀಂ, ಎಸ್.ಎಮ್ ಇಬ್ರಾಹೀಂ, ಮುಹಮ್ಮದ್ ಆಶ್ರಫ್, ಎಸ್.ಕೆ ಇಸ್ಮಾಯಿಲ್, ಸದಸ್ಯರಾದ ಎಂ.ಎ ಗಫೂರ್, ಶಂಶುದ್ದೀನ್ ಕುದ್ರೋಳಿ, ಯು.ಎಫ್ ಇಕ್ಬಾಲ್, ಮುನೀರ್ ಎಂಎನ್ ಆರ್, ಮುಹಮ್ಮದ್ ಎಮ್‌ಎಕ್ಸ್ ಎಮ್, ರಹಿಮಾನ್ ಸಾಗರ್, ಸಲಹೆಗಾರ ಮಯ್ಯದಿ ಕಾರ್ನಾಡ್ ಉಪಸ್ಥಿತರಿದ್ದರು.

ಸಲಹೆಗಾರ ಮುಸ್ತಫಾ ಹರೇಕಳ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುಲ್ ಲತೀಫ್.ಡಿ ವಂದಿಸಿದರು. 









 


 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News