×
Ad

ಧರ್ಮಸ್ಥಳ ಪ್ರಕರಣದ ತನಿಖೆಗೆ ಕಾಲಮಿತಿ ನಿಗದಿಪಡಿಸಿಲ್ಲ: ಗೃಹಸಚಿವ ಪರಮೇಶ್ವರ್

Update: 2026-02-06 15:13 IST

ಚಿಕ್ಕಮಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ತನಿಖೆ ಪೂರ್ಣಗೊಳಿಸಲು ಕಾಲಮಿತಿ ವಿಧಿಸಿಲ್ಲ. ಆದರೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಲು ತನಿಖೆಯ ಆರಂಭದಲ್ಲೇ ಸೂಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಂತಿಮ ವರದಿ ಇನ್ನೂ ಕೊಟ್ಟಿಲ್ಲ. ಅವರು ಎಲ್ಲೆಲ್ಲಿ ಸಾಕ್ಷಿ ಕಲೆ ಹಾಕಬೇಕಿತ್ತೋ ಅಲ್ಲಲ್ಲೇ ಹೋಗಿ ತನಿಖೆ ಮಾಡಿದ್ದಾರೆ. ಅವೆಲ್ಲವನ್ನು ಕ್ರೋಡೀಕರಿಸಿ ಶೀಘ್ರದಲ್ಲೇ ಅಂತಿಮ ವರದಿ ನೀಡುತ್ತಾರೆ. ಆಮೇಲೆ ವರದಿ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಪ್ರಕರಣದ ತನಿಖೆ ಯಾವಾಗ ಪೂರ್ಣಗೊಳ್ಳಲಿದೆ ಎಂದು ಕಾಲದ ಮಿತಿ ಹೇಳಲಾಗದು. ಸ್ಯಾಟ್ ಲೈಟ್ ಲಾಂಚ್ ಮಾಡುವುದಾದರೆ ಕಾಲ ಮಿತಿ ಹೇಳಬಹುದು. ಇದು ಆಗಲ್ಲ. ಆದಷ್ಟು ಬೇಗ ತನಿಖೆ ತಂಡ ಅಂತಿಮ ಸಿದ್ಧಪಡಿಸಿ ಸರಕಾರದ ಮುಂದಿಡುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಗೃಹಸಚಿವರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News