Spell Bee ಗ್ರ್ಯಾಂಡ್ ಫಿನಾಲೆ: ಸುನ್ನತ್‌ಕೆರೆಯ ಶಮ್ಮಾಸ್ ರಾಷ್ಟ್ರಕ್ಕೆ 20ನೇ ರ್‍ಯಾಂಕ್
ಶಮ್ಮಾಸ್ - ಶಯಾನ್
ಮಂಗಳೂರು: ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಶನಿವಾರ ಮತ್ತು ರವಿವಾರ ನಡೆದ ರಾಷ್ಟ್ರಮಟ್ಟದ Spell Bee ಗ್ರ್ಯಾಂಡ್ ಫಿನಾಲೆನಲ್ಲಿ ಸ್ಟಾರ್‌ಲೈನ್ ಸ್ಕೂಲ್ ಮಂಜೊಟ್ಟಿ ಇಲ್ಲಿನ 2ನೆ ತರಗತಿಯ ವಿದ್ಯಾರ್ಥಿ ಮುಹಮ್ಮದ್ ಶಮ್ಮಾಸ್ ರಾಷ್ಟ್ರಮಟ್ಟದಲ್ಲಿ 20ನೆ ರ್‍ಯಾಂಕ್ ಪಡೆದಿದ್ದಾರೆ.
ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿ, 2ನೆ ತರಗತಿಯ ಮುಹಮ್ಮದ್ ಶಯಾನ್ 105ನೆ ರ್‍ಯಾಂಕ್ ಪಡೆದಿದ್ದಾರೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳ ಸುಮಾರು 700 ವಿದ್ಯಾರ್ಥಿಗಳು Spell Bee ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ್ದರು.
ಅ.12ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ Spell Bee ಸ್ಪರ್ಧೆಯಲ್ಲಿ ಕರ್ನಾಟಕದಿಂದ ಕ್ಯಾಟಗರಿ 1ರಲ್ಲಿ 35 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು.
ಮುಹಮ್ಮದ್ ಶಮ್ಮಾಸ್ ಸುನ್ನತ್ ಕೆರೆ ನಿವಾಸಿ, ʼವಾರ್ತಾಭಾರತಿʼಯ ಉಪಸಂಪಾದಕ ರಿಯಾಝ್ ಇಕೆ, ಶಮೀಮಾ ದಂಪತಿಯ ಪುತ್ರ ಹಾಗು ಮುಹಮ್ಮದ್ ಶಯಾನ್ ಲಾಯಿಲ ನಿವಾಸಿ ಶೇಖ್ ಅಬ್ದುಲ್ ಶಾಹಿದ್ ಹಾಗು ಶಬನಾ ದಂಪತಿಯ ಪುತ್ರ.