×
Ad

ದಾವಣಗೆರೆ | ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣ: ಚಿಕಿತ್ಸೆ ಫಲಿಸದೆ ಓರ್ವ ಬಾಲಕ ಸಾವು

Update: 2024-03-17 21:20 IST

ಹಝ್ರತ್‌ ಬಿಲಾಲ್ ಬಿನ್ ಇರ್ಫಾನ್ (06)

ದಾವಣಗೆರೆ: ಪಾನಿಪೂರಿ ಸೇವಿಸಿ 19ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಬಾಲಕನನ್ನು ಹಝ್ರತ್‌ ಬಿಲಾಲ್ ಬಿನ್ ಇರ್ಫಾನ್ (06) ಎಂದು ಗುರುತಿಸಲಾಗಿದ್ದು, ಇದೇ ಮಾ15 ರಂದು ರಮಝಾನ್ ಹಬ್ಬ ಹಿನ್ನಲೆ ಉಪವಾಸ ಇದ್ದ ಮಕ್ಕಳು. ಉಪವಾಸ ಅಂತ್ಯ ಮಾಡಿ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು ಎಂದು ಹೇಳಲಾಗಿದೆ.

ವಾಂತಿ - ಭೇದಿ, ಹೊಟ್ಟೆ ನೋವಿನಿಂದ ಬಳಲಿದ್ದ ಮಕ್ಕಳನ್ನು, ದಾವಣಗೆರೆ ಖಾಸಗಿ ಆಸ್ಪತ್ರೆಗೆ  ದಾಖಲಿಸಿ ಚಿಕಿತ್ಸೆ  ಕೊಡಿಸಲಾಗುತ್ತಿತ್ತು. ಆದರೆ ರವಿವಾರ  ಚಿಕಿತ್ಸೆ ಫಲಿಸದೆ ಓರ್ವ ಬಾಲಕ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News