×
Ad

ಪತ್ನಿಯ ಮತ ತಾವೇ ಹಾಕಿದರೇ ಸಂಸದ ಸಿದ್ದೇಶ್ವರ್ ?

Update: 2024-05-07 18:46 IST

ದಾವಣಗೆರೆ : ರಾಜ್ಯದಲ್ಲಿ ಎರಡನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಸಂಸದ ಸಿದ್ದೇಶ್ವರ್ ಅವರು ತಮ್ಮ ಪತ್ನಿಯ ಮತವನ್ನು ತಾನೇ ಹಾಕಿ ಚುನಾವಣಾ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.

ದಂಪತಿ ಸಮೇತರಾಗಿ ಮತಗಟ್ಟೆಗೆ ಆಗಮಿಸಿದ್ದ ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರು ಮತ ಹಾಕಲು ಗೊಂದಲದಲ್ಲಿದ್ದ ಸಂದರ್ಭದಲ್ಲಿ, ಗಾಯತ್ರಿ ಅವರ ಮತವನ್ನು ಅವರ ಪತಿ ಸಂಸದ ಸಿದ್ದೇಶ್ವರ್‌ ಅವರೇ ಹಾಕಿದ್ದಾರೆ ಎನ್ನಲಾಗಿದೆ.

ದಾವಣಗೆರೆ ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 236 ರಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಸಹಾಯ ಮಾಡಲು ತಾನೇ ಮತದಾನ ಮಾಡಿದ ಸಂಸದರ ವಿರುದ್ಧ ʼತನ್ನ ಮತ ತಾನೇ ಹಾಕಿಕೊಳ್ಳದ ಬಿಜೆಪಿ ಅಭ್ಯರ್ಥಿ ಆಡಳಿತ ಹೇಗೆ ನಡೆಸುತ್ತಾರೆʼ ಎಂದು ಕಾಂಗ್ರೆಸ್‌ ನಾಯಕರು, ಜನರು ವ್ಯಂಗ್ಯವಾಡಿದ್ದಾರೆ.

ಇನ್ನೊಬ್ಬರು ಹೋಗಿ ಚಿಹ್ನೆ ತೋರಿಸುವುದು ಕಾನೂನು ಬಾಹಿರ

ಬಿಜೆಪಿ ಅಭ್ಯರ್ಥಿಗೆ ಅವರ ಪತಿಯು ಈ ಚಿಹ್ನೆಗೆ ಒತ್ತು ಎಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಚಿಹ್ನೆ ಯಾವುದು ಎಂದು ಗೊತ್ತಿರದವನ್ನು ಜನೆ ಹೇಗೆ ಆಯ್ಕೆ ಮಾಡುತ್ತಾರೆ ಗೊತ್ತಿಲ್ಲ. ಅಲ್ಲದೆ ಒಬ್ಬರು ಮತದಾನ ಮಾಡುವಾಗ ಇನ್ನೊಬ್ಬರು ಹೋಗಿ ಚಿಹ್ನೆ ತೋರಿಸುವುದು ಕಾನೂನು ಬಾಹಿರ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News