×
Ad

ಉಪಚುನಾವಣೆಗೆ ಸೋಲಿಗೆ ಯತ್ನಾಳ್ ಹರಕುಬಾಯಿ ಕಾರಣ : ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

Update: 2024-11-24 20:34 IST

ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ : "ಯತ್ನಾಳ್ ಹರಕು ಬಾಯಿಯಿಂದಲೇ ನಾವು ಉಪ ಚುನಾವಣೆ ಸೋತೆವು" ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಹೇಳುವ ಯತ್ನಾಳ್ ಅವರು ತಮ್ಮ ತಂಡದೊಂದಿಗೆ ಶಿಗ್ಗಾಂವಿಯಲ್ಲಿ ಠಿಕಾಣಿ ಹೂಡಿದ್ದರು. ಹಾಗಿದ್ದರೂ ಕೂಡ ಶಿಗ್ಗಾಂವಿಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದು ಏಕೆ ಎಂಬುದನ್ನು ಅವರೇ ತಿಳಿಸಬೇಕುʼ ಎಂದರು.

ʼಯತ್ನಾಳ್ ಹರಕು ಬಾಯಿಯಿಂದಲೇ ನಾವು ಹಿಂದೆ 2023ರ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ದೆವು. ಈಗ ನಡೆದ ಮೂರು ಉಪ ಚುನಾವಣೆಯಲ್ಲೂ ಸೋಲು ಕಾಣಲು ಯತ್ನಾಳ್ ಹರಕುಬಾಯಿಯೇ ಕಾರಣʼ ಎಂದು ಆರೋಪಿಸಿದರು.

ʼಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಯತ್ನಾಳ್ ಮತ್ತವರ ತಂಡವೇ ಕಾರಣ. ಯತ್ನಾಳ್ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಕೇಂದ್ರದ ವರಿಷ್ಠರಿಗೆ ಅವರ ವಿರುದ್ಧ ಪತ್ರ ಬರೆದು ಮನವಿ ಸಲ್ಲಿಸಲಾಗುವುದುʼ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News