×
Ad

ಸಿಎಂ ಕುರ್ಚಿ ಖಾಲಿ ಇಲ್ಲ, 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ : ಝಮೀರ್‌ ಅಹ್ಮದ್‌

Update: 2024-10-06 19:16 IST

ಝಮೀರ್‌ ಅಹ್ಮದ್‌ 


ದಾವಣಗೆರೆ: ʼಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. 5 ವರ್ಷ ಪೂರ್ಣವಾಗಿ ಸಿದ್ದರಾಮಯ್ಯನವರೇ ಅಧಿಕಾರ ನಡೆಸಲಿದ್ದಾರೆʼ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಪ್ ಸಚಿವ ಝಮೀರ್‌ ಅಹ್ಮದ್‌ ಖಾನ್ ಹೇಳಿದರು.‌

ರವಿವಾರ  ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, " ಮುಖ್ಯಮಂತ್ರಿಯಾಗಲು ಮುಸ್ಲಿಂ, ದಲಿತ ಹಾಗೂ ಒಕ್ಕಲಿಗರು ಸೇರಿದಂತೆ ಎಲ್ಲರಿಗೂ ಆಸೆ ಇದೆ. ಅದರೆ, ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯನವರು ಕುರ್ಚಿ ಮೇಲೆ ಕೂಳಿತಿದ್ದಾರೆ. ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಸಿಎಂ ಸ್ಥಾನ ಉಳಿಸಲು ಪ್ಲಾನ್ ಎ,ಬಿ,ಸಿ ಯಾವುದು ಇಲ್ಲ" ಎಂದು ಸ್ಪಷ್ಟಪಡಿಸಿದರು.

ಶಾಸಕ ಜಿ.ಟಿ.ದೇವೇಗೌಡ ನಮ್ಮ ಪಕ್ಷದವರಲ್ಲ. ಆದರೆ, ಅವರಿಗೆ ಮುಡಾದ ಸತ್ಯಾಂಶ ಗೊತ್ತಿದೆ. ಈ ಹಿನ್ನಲೆಯಲ್ಲಿ ದಸರಾ ಕಾರ್ಯಕ್ರಮದ ವೇದಿಕೆ ಮೇಲೆ ಅವರ ಅಭಿಪ್ರಾಯ ಹೇಳಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಯಾವ ಕಾನೂನಿನಲ್ಲಿ ಇಲ್ಲ. ರಾಜ್ಯದಲ್ಲಿ ಮೋದಿ ಅವರಗಿಂತ ಸಿದ್ದರಾಮಯ್ಯ ಅವರು ಜನಪ್ರಿಯರಾಗಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News