ಸಂಜೀವ ಶೆಟ್ಟಿಗಾರ್
Update: 2026-06-28 19:39 IST
ಉಡುಪಿ, ಜೂ.28: ಕೊರಂಗ್ರಪಾಡಿಯ ನಿವಾಸಿ, ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷ, ಹಿರಿಯ, ಅನುಭವಿ ನೇಕಾರರು, ಕೆ.ಸಂಜೀವ ಶೆಟ್ಟಿಗಾರ್(87) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾದರು.
ಇವರು ನೇಕಾರರ ಮುಖಂಡರಾಗಿ, ನೇಯ್ಗೆ ಕೆಲಸಗಾರರ ಯೂನಿಯನ್ ರಚಿಸಿ, ನೇಕಾರರ ಒಳಿತಿಗಾಗಿ ಹೋರಾಟ ಮಾಡಿದ್ದರು. ಕಳೆದ 31 ವರ್ಷಗಳಿಂದ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನೇಕಾರಿಕೆಯ ಸೇವೆಯನ್ನು ಪರಿಗಣಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ, ಅಭಿನಂದಿಸಿ, ಸನ್ಮಾನಿಸಿದೆ. ಇವರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.