×
Ad

ಮುಹಮ್ಮದ್ ಅಶ್ರಫ್ ಕೋಡಿಕಲ್

Update: 2026-06-29 21:48 IST

ಮಂಗಳೂರು , ಜೂ.29: ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಮಂಗಳೂರಿನ ಕುದ್ರೋಳಿ ನಿವಾಸಿ ಮುಹಮ್ಮದ್ ಅಶ್ರಫ್ ಕೋಡಿಕಲ್(47) ಎಂಬವರು ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಶಾರ್ಜಾದಲ್ಲಿ ನಿಧನರಾದರು.

ಕಳೆದ 25 ವರ್ಷಗಳಿಂದ ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಮುಹಮ್ಮದ್ ಅಶ್ರಫ್ ಅವರು ಬೆಳಗ್ಗೆ ಮಸೀದಿಯಲ್ಲಿ ನಮಾಝ್ ಮುಗಿಸಿ ವಾಪಸಾಗಿ ಮಲಗಿ ನಿದ್ರಿಸುತ್ತಿದ್ದಾಗ ಹೃದಯಾಘಾತವಾಗಿದೆ. ಸಂಬಂಧಿಯೊಬ್ಬರು ಮಾಡಿದ ಫೋನ್ ಕರೆಯನ್ನು ಅಶ್ರಫ್ ಸ್ವೀಕರಿಸದ ಹಿನ್ನೆಲೆಯಲ್ಲಿ ಅವರು ಮನೆಗೆ ಬಂದು ನೋಡಿದಾಗ ಅಶ್ರಫ್ ಅವರಿಗೆ ಹೃದಯಾಘಾತವಾಗಿರುವ ವಿಚಾರ ಬೆಳಕಿಗೆ ಬಂತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮುಹಮ್ಮದ್ ಅಶ್ರಫ್ ಅವರು ಪತ್ನಿ, 1 ಗಂಡು, 2 ಹೆಣ್ಣು, ತಾಯಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಝೈನಬ