×
Ad

ಮೋದಿ ಬಂದ ಮೇಲೆ ಕೆಂದ್ರದಲ್ಲಿ ಸಮ್ಮಿಶ್ರ ಸರಕಾರದ ಕಾಲ ಮುಗಿದಿದೆ : ಬೊಮ್ಮಾಯಿ

Update: 2024-04-03 18:26 IST

ಹಾವೇರಿ : ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸಮ್ಮಿಶ್ರ ಸರಕಾರದ ಕಾಲ ಮುಗಿದು ಹೋಗಿದೆ. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಏಕಪಕ್ಷದ ಆಡಳಿತ ಒಳ್ಳೆಯದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಪಧಾನಿ ಮೋದಿಯವರು ಈ ಚುನಾವಣೆಯ ಕೇಂದ್ರ ಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಎರಡು ವ್ಯಕ್ತಿತ್ವದ ನಡುವೆ ಚುನಾವಣೆಯಾಗುತ್ತದೆ. ಆದರೆ, ಇಲ್ಲಿ ಮೋದಿ ಪರ ಹಾಗೂ ಮೋದಿ ವಿರುದ್ಧ ಚುನಾವಣೆ ನಡೆಯುತ್ತಿದೆ. ಮೋದಿಯಂತಹ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದು ಹೇಳಿದರು.

ಲೋಕಸಭೆಯ 543 ಸ್ಥಾನದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗದಿರುವ ಪಕ್ಷಗಳು ದೇಶ ಆಳುವ ಬಗ್ಗೆ ಮಾತನಾಡುತ್ತವೆ. ಹಿಂದೆ ಸಣ್ಣ ಸಣ್ಣ ಪಕ್ಷಗಳು ಸೇರಿ ಸರಕಾರ ಆಳಿರುವುದನ್ನು ನೋಡಿದ್ದೇವೆ. ಕೇಂದ್ರದಲ್ಲಿ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರಕಾರದ ಕಾಲ ಮುಗಿದು ಹೋಗಿದೆ. ಇದು ದೇಶದ ಅಭಿವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ಕೆಲಸವನ್ನು ದೇಶದ ಪ್ರಜೆಗಳು ಮಾಡುತ್ತಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News